ಮಂಜೇಶ್ವರ: ಯುವ ಮತದಾರರನ್ನು ಮತಗಟ್ಟೆಗಳಿಗೆ ಆಕರ್ಷಿಸುವ ಉದ್ದೇಶದಿಂದ ಪ್ರಾರಂಭಿಸಲಾದ 'ಸ್ವೀಟ್ ವೋಟ್' ಅಭಿಯಾನದ ಅಂಗವಾಗಿ ಮತಗಟ್ಟೆಗಳಲ್ಲಿ ಮೊದಲಬಾರಿಗೆ ಮತಚಲಾಯಿಸುವ ಹೊಸ ಮತದಾರರಿಗೆ ಹಲ್ವಾ ವಿತರಿಸಲಾಯಿತು. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಜಿವಿಎಚ್ ಎಚ್‍ಎಸ್‍ಎಸ್ ಕುಂಜತ್ತೂರಿನಿಂದ ಆರಂಭಗೊಂಡು ತ್ರಿಕರಿಪುರ ಕ್ಷೇತ್ರದ ಜಿವಿಎಚ್ ಎಚ್‍ಎಸ್‍ಎಸ್ ತ್ರಿಕರಿಪುರದವರೆಗಿನ 136 ಬೂತ್‍ಗಳಲ್ಲಿ ಒಟ್ಟು 200ಮಂದಿ ಹೊಸ ಮತದಾರರಿಗೆ ಮತದಾನದ ಅವಕಾಶ ಲಭಿಸಿತ್ತು.
ಸ್ವೀಪ್ ನೋಡಲ್ ಅಧಿಕಾರಿ ರತೀಶ್ ಪಿಲಿಕೋಡ್ ನೇತೃತ್ವದಲ್ಲಿ ಹೊಸ ಮತದಾರರಿಗೆ ಹಲ್ವಾ ವಿತರಿಸಲಾಯಿತು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿನ ಮಾದರಿ ಬೂತ್‍ಗಳನ್ನು ಸಿಹಿ ವಿತರಣೆಗಾಗಿ ಪರಿಗಣಿಸಲಾಗಿತ್ತು.
(ಮಂಗಲ್ಪಾಡಿ ಜಿಬಿಎಲ್‍ಪಿ ಶಾಲೆಯ ಮತಗಟ್ಟೆಯಲ್ಲಿ ಹೊಸ ಮತದಾರರು.)

.jpeg)
