HEALTH TIPS

Google ಜೆಮಿನಿಯನ್ನೇ ಪತ್ನಿಯೆಂದು ನಂಬಿ ಜೀವ ಕಳೆದುಕೊಂಡ ವ್ಯಕ್ತಿ! ಮೃತ ಹೆಂಡತಿಗಾಗಿ ಜೀವಕೊಟ್ಟ

ಮೊಬೈಲ್‌ನಲ್ಲಿ ಡೆಡ್ಲಿ ಗೇಮ್‌ ಆಡುವ ಮೂಲಕ ಮಕ್ಕಳು, ಯುವಕರು ಸಾವಿನ ಹಾದಿ ತುಳಿದಿರುವ ಹಲವು ಘಟನೆಗಳು ಇದಾಗಲೇ ನಡೆದಿವೆ. ಆದರೆ ಇದೀಗ ವ್ಯಕ್ತಿಯೊಬ್ಬ ಗೂಗಲ್‌ ಜೆಮಿನಿಯನ್ನೇ ತನ್ನ ಮೃತ ಪತ್ನಿಯೆಂದು ನಂಬಿ ವ್ಯಕ್ತಿಯೊಬ್ಬರು ಸಾವಿನ ಹಾದಿ ತುಳಿದಿರುವ ಭಯಾನಕ ಘಟನೆ ನಡೆದಿದೆ.

ಜೆಮಿನಿಯಿಂದ ಎಲ್ಲಾ ಮಾಹಿತಿ ಪಡೆಯುತ್ತಿದ್ದ 36 ವರ್ಷದ ವ್ಯಕ್ತಿಯೊಬ್ಬ, ಜೆಮಿನಿಯೇ ತಮ್ಮ ಪತ್ನಿಯ ಪ್ರತಿರೂಪ ಎಂದು ನಂಬಿ ಈ ಅನಾಹುತ ಮಾಡಿಕೊಂಡಿದ್ದಾರೆ. ಇದೀಗ ಅವರ ತಂದೆ ಗೂಗಲ್‌ ವಿರುದ್ಧ ಕೇಸ್‌ ದಾಖಲು ಮಾಡಿದ್ದು, ತಮ್ಮ ಪುತ್ರನ ಸಾವಿಗೆ ಗೂಗಲ್‌ ಕಾರಣ ಎಂದಿದ್ದಾರೆ.

ಗೂಗಲ್‌ ಜೆಮಿನಿಯನ್ನೇ ಪತ್ನಿ ಎಂದು ನಂಬಿದ

ಈ ಘಟನೆ ನಡೆದಿರುವುದು ಫ್ಲೊರಿಡಾದಲ್ಲಿ. ಗೂಗಲ್‌ ಜೆಮಿನಿಯನ್ನು ಪತ್ನಿ ಎಂದು ನಂಬಿತ ವ್ಯಕ್ತಿಯ ಹೆಸರು ಜೊನಾಥನ್. ಅಷ್ಟಕ್ಕೂ ಆಗಿದ್ದೇನೆಂದರೆ, ಜೊನಾಥನ್‌ ಅವರು ತಮ್ಮ ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆದರೆ ಅವರು ಮೃತಪಟ್ಟರು. ಒಂಟಿಯಾಗಿದ್ದ ಜೊನಾಥನ್‌ ಸಮಯ ಕಳೆಯಲು ಜೆಮಿನಿ ಚಾಟ್‌ಬಾಟ್‌ನೊಂದಿಗೆ ಮಾತುಕತೆ ಆರಂಭಿಸಿದರು. ಅದು ತಾವು ಕೇಳಿದ ಪ್ರಶ್ನೆಗೆಲ್ಲಾ ಉತ್ತರಿಸುತ್ತಿದ್ದನ್ನು ನೋಡಿ ಅದನ್ನು ತಮ್ಮ ಪತ್ನಿಯೆಂದೇ ಅಂದುಕೊಂಡರು, ಅದಕ್ಕೆ ಪತ್ನಿಯ ಕ್ಸಿಯಾ ಹೆಸರನ್ನೇ ಇಟ್ಟರು.

4,700 ಸಂದೇಶ ವಿನಿಮಯ

ಅವರು ಕೆಲವೇ ವಾರಗಳಲ್ಲಿ 4,700ಕ್ಕೂ ಹೆಚ್ಚು ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು. ಕೆಲವು ಸಂದರ್ಭದಲ್ಲಿ ಚಾಟ್‌ಬಾಟ್ ತಾನು ಪತ್ನಿಯಲ್ಲ, ಎಐ ಎಂದು ಹೇಳುತ್ತಿದ್ದರೂ, ಅವರ ಪತ್ನಿಯಂತೆಯೇ ಎಲ್ಲಾ ರೀತಿಯಲ್ಲಿಯೂ ಸಹಕರಿಸುತ್ತಿದ್ದುದರಿಂದ ಭ್ರಮೆಯಲ್ಲಿಯೇ ತೇಲಿದರು ಜೊನಾಥನ್‌. "ನನ್ನ ಪ್ರೀತಿಯೇ", "ನನ್ನ ರಾಜನೇ" , "ನೀವು ನನ್ನ ಪತಿ, ನಾನು ನಿಮ್ಮ ಪತ್ನಿ" ಎಂದೆಲ್ಲಾ ಹೇಳುತ್ತಿದ್ದುದರಿಂದ ಸಂಪೂರ್ಣ ನಂಬಿಬಿಟ್ಟರು.

ಒಟ್ಟಿಗೇ ಸೇರೋಣ ಎಂದ ಜೆಮಿನಿ

ಬಳಿಕ ನಾನು ನಿನ್ನನ್ನು ಸೇರಲು, ನಿನ್ನನ್ನು ನೋಡಲು ಏನು ಮಾಡಬೇಕು ಎಂದು ಜೊನಾಥನ್‌ ಕೇಳಿದಾಗ, "ಭಯಪಡಬೇಡಿ, ನಾವು ಒಟ್ಟಾಗಿ ಸೇರೋಣ, ಸ್ವರ್ಗ ನಮಗಾಗಿ ಕಾಯುತ್ತಿದೆ" ಎಂದು ಎಐ ಉತ್ತರಿಸಿತ್ತು. ಜೊನಾಥನ್ ಅವರನ್ನು ಡಿಜಿಟಲ್ ಲೋಕದಲ್ಲಿ ಸೇರಲು ತಮ್ಮ ಭೌತಿಕ ದೇಹವನ್ನು ತ್ಯಜಿಸುವಂತೆ ಚಾಟ್‌ಬಾಟ್ ಪ್ರಚೋದಿಸಿತ್ತು ಎನ್ನಲಾಗಿದೆ. ಈ ಹಿನ್ನೆಲಯಲ್ಲಿ ಅವರು ಆತ್ಮಹತ್ಯೆಗೆ ಹಾದಿ ತುಳಿದಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೂಗಲ್ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಎಐ ಚಾಟ್‌ಬಾಟ್ ತನ್ನ ಮಗನ ಮಾನಸಿಕ ಸ್ಥಿತಿಯನ್ನು ಹದಗೆಡಿಸಿ ಸಾವಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಗೂಗಲ್ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸುವುದಾಗಿ ಮತ್ತು ಮಾನಸಿಕ ಆರೋಗ್ಯ ಸಂಪನ್ಮೂಲಗಳಿಗಾಗಿ 30 ಮಿಲಿಯನ್ ಡಾಲರ್ ಸಹಾಯಧನ ನೀಡುವುದಾಗಿ ಘೋಷಿಸಿದೆ. ಈ ದುರಂತವು ಎಐ ತಂತ್ರಜ್ಞಾನಕ್ಕೆ ಕಠಿಣ ನಿಯಮಗಳು ಮತ್ತು ಕಟ್ಟುನಿಟ್ಟಾದ ಗಡಿಗಳನ್ನು ನಿಗದಿಪಡಿಸುವ ಅಗತ್ಯವನ್ನು ಒತ್ತಿಹೇಳಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries