ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಮುಖವಾಗಿ ಆಡಳಿತರೂಢ ಎಲ್‌ಡಿಎಫ್ ಹಾಗೂ ಯುಡಿಎಫ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.
ಈ ನಡುವೆ ಕೇರಳದಲ್ಲಿ 'ಪೋಲ್ ಟ್ರ್ಯಾಕರ್' ನಡೆಸಿದ ಸಮೀಕ್ಷೆ ಹೊರಬಿದ್ದಿದೆ.
ಪೋಲ್ ಟ್ರ್ಯಾಕರ್ ಪ್ರಕಾರ, ಈ ಬಾರಿ ಎಲ್‌ಡಿಎಫ್‌ಗೆ ಅಧಿಕಾರ ನಷ್ಟವಾಗಲಿದೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸ್ಪಷ್ಟ ಬಹುಮತವನ್ನು ಪಡೆಯಲಿದೆ.
ಎಷ್ಟು ಸ್ಥಾನ?
140 ಸದಸ್ಯ ಬಲದ ಕೇರಳದಲ್ಲಿ ಯುಡಿಎಫ್ 76ರಿಂದ 85 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಲ್‌ಡಿಎಫ್ 55ರಿಂದ 60 ಸ್ಥಾನಗಳಿಗೆ ಕುಸಿಯಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 1ರಿಂದ 3 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದಿದೆ.
ಮುಂದಿನ ಸಿಎಂ ಯಾರು?
ಒಂದು ವೇಳೆ ಯುಡಿಎಫ್ ಅಧಿಕಾರಕ್ಕೆ ಬಂದರೆ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
ಪೋಲ್ ಟ್ರ್ಯಾಕರ್ ಸಮೀಕ್ಷೆ ಪ್ರಕಾರ, ಸಿಎಂ ಪಿಣರಾಯಿ ವಿಜಯನ್ ಅವರನ್ನೇ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಮೀರಿಸಿದ್ದಾರೆ.
ಮುಂದಿನ ಸಿಎಂ ಯಾರಾಗಬೇಕು ಎಂಬ ಪ್ರಶ್ನೆಗೆ ಚೆನ್ನಿತ್ತಲ ಶೇ 24ರಷ್ಟು ಜನಪ್ರಿಯತೆ ಕಾಯ್ದುಕೊಂಡಿದ್ದಾರೆ. ಮೂರನೇ ಸಲ ಸಿಎಂ ಸ್ಥಾನಕ್ಕೆ ಪಿಣರಾಯಿ ಅವರನ್ನು ಶೇ 22.3ರಷ್ಟು ಜನರು ಮಾತ್ರ ಬಯಸುತ್ತಿದ್ದಾರೆ.

