HEALTH TIPS

LPG Crisis: ಇಂಡಕ್ಷನ್‌ ಬಳಕೆಗೆ ಉತ್ತೇಜಿಸುವ ಬಗ್ಗೆ ಚರ್ಚಿಸಲು ಸಭೆ ಕರೆದ ಕೇಂದ್ರ

 ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ಎಲ್‌ಪಿಜಿ ಸಮಸ್ಯೆ ಹಾಗೂ ಭವಿಷ್ಯದ ಇಂಧನ ಕೊರತೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಇಂಡಕ್ಷನ್‌ ಬಳಕೆಯನ್ನು ಉತ್ತೇಜಿಸುವ ಕುರಿತು ಕೇಂದ್ರ ಸರ್ಕಾರವು ಶುಕ್ರವಾರ(ಏ.3) ಸಭೆ ಕರೆದಿದೆ. 


ಈ ಸಭೆಯಲ್ಲಿ ಎಲ್‌ಪಿಜಿ ಕೊರತೆಯಿಂದ ಉಂಟಾಗಿರುವ ಹೆಚ್ಚಿನ ಪ್ರಮಾಣದ ಇಂಡಕ್ಷನ್ ಹೀಟರ್‌ಗಳ ಬೇಡಿಕೆಯನ್ನು ಪೂರೈಕೆಗೆ ಅನುಗುಣವಾಗಿ ಕಂಪನಿಗಳ ಉತ್ಪಾದನೆಯನ್ನು ಉತ್ತೇಜಿಸಲು ಏನು ಕ್ರಮ ತೆಗೆದುಕೊಳ್ಳಬಹುದು ಎನ್ನುವುದರ ಕುರಿತು ಕೂಡ ಚರ್ಚೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಇಂಧನ ಕಾರ್ಯದರ್ಶಿ, ಡಿಜಿಎಫ್‌ಟಿ, ಡಿಪಿಐಐಟಿ ಕಾರ್ಯದರ್ಶಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದ ಇರಾನ್, ಹೊರ್ಮುಜ್‌ ಜಲಸಂಧಿಯ ಮೇಲೆ ಹಿಡಿತ ಸಾಧಿಸಿದೆ. ಇದರಿಂದ ಜಗತ್ತಿನ ಹಲವು ಭಾಗಗಳಲ್ಲಿ ತೈಲ ಸರಬರಾಜು ಹಾಗೂ ಅಡುಗೆ ಎಲ್‌ಪಿಜಿ ಕೊರತೆ ಉಂಟಾಗಿದೆ. ಇದರಿಂದ ಭಾರತದ ಸೇರಿದಂತೆ, ಹಲವೆಡೆ ಇಂಡಕ್ಷನ್‌ಗೆ ಬೇಡಿಕೆ ಹೆಚ್ಚಾಗಿದೆ. ಅವುಗಳನ್ನು ಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries