HEALTH TIPS

NCERTಗೆ ಡೀಮ್ಡ್-ಟು-ಬಿ ವಿವಿ ಸ್ಥಾನಮಾನ; ತನ್ನದೇ ಪದವಿಗಳನ್ನು ನೀಡುವ ಅಧಿಕಾರ

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಗೆ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಸ್ಥಾನಮಾನವನ್ನು ಔಪಚಾರಿಕವಾಗಿ ಘೋಷಿಸಲಾಗಿದ್ದು, ಅದು ತನ್ನದೇ ಪದವಿಗಳನ್ನು ನೀಡುವ ಅಧಿಕಾರವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಸಲಹೆಯ ಮೇರೆಗೆ ಶಿಕ್ಷಣ ಸಚಿವಾಲಯವು ವಿಶಿಷ್ಟ ವರ್ಗದಡಿ NCERTಯನ್ನು ಅದರ ಆರು ಘಟಕಗಳೊಂದಿಗೆ ಡೀಮ್ಡ್ ವಿವಿಯಾಗಿ ಘೋಷಿಸಿದೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಈ ಘಟಕಗಳಲ್ಲಿ ಅಜ್ಮೇರ್, ಭೋಪಾಲ, ಭುವನೇಶ್ವರ, ಮೈಸೂರು ಮತ್ತು ಶಿಲ್ಲಾಂಗ್‌ ನಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು ಹಾಗೂ ಭೋಪಾಲದ ಪಂಡಿತ ಸುಂದರಲಾಲ್ ಶರ್ಮಾ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ವೊಕೇಷನಲ್ ಎಜ್ಯುಕೇಷನ್ ಸೇರಿವೆ.

ಶಾಲಾ ಶಿಕ್ಷಣದ ಅತ್ಯುನ್ನತ ಸಂಸ್ಥೆಯಾಗಿರುವ NCERT, ಶೈಕ್ಷಣಿಕ ಸಂಶೋಧನೆ ಮತ್ತು ನವೀನತೆ, ಪಠ್ಯಕ್ರಮ ಅಭಿವೃದ್ಧಿ ಹಾಗೂ ಪಠ್ಯ ಮತ್ತು ಬೋಧನಾ-ಕಲಿಕಾ ಸಾಮಗ್ರಿಗಳ ಅಭಿವೃದ್ಧಿ ಸೇರಿದಂತೆ ವಿವಿಧ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ.

ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು 'ಡೆ ನೊವೊ' ವರ್ಗದಲ್ಲಿ NCERTಗೆ ಡೀಮ್ಡ್-ಟು-ಬಿ ವಿವಿ ಸ್ಥಾನಮಾನ ನೀಡಿಕೆಯನ್ನು ಅನುಮೋದಿಸಿತ್ತು.

ಡೆ-ನೊವೊ ಡೀಮ್ಡ್ ವಿವಿಯು ಡೀಮ್ಡ್-ಟು-ಬಿ ವಿವಿಯಾಗಿ ಹೊಸ ಸಂಸ್ಥೆಯನ್ನು ಸ್ಥಾಪಿಸಲು UGCಗೆ ಅರ್ಜಿ ಸಲ್ಲಿಸಬಹುದು. ಹೊಸ ಸಂಸ್ಥೆಯು ಅಸ್ತಿತ್ವದಲ್ಲಿರುವ ಯಾವುದೇ ಸಂಸ್ಥೆ ನೀಡದ ವಿಶಿಷ್ಟ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಳ್ಳುತ್ತದೆ.

NCERT ಯಾವುದೇ ವಾಣಿಜ್ಯಿಕ ಮತ್ತು ಲಾಭಾರ್ಜಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು; ಎಲ್ಲಾ ಶೈಕ್ಷಣಿಕ ಕೋರ್ಸ್‌ಗಳು ಅಥವಾ ಕಾರ್ಯಕ್ರಮಗಳು UGC ಹಾಗೂ ಶಾಸನಬದ್ಧ ಸಂಸ್ಥೆಗಳು ಅಥವಾ ಮಂಡಳಿಗಳು ಸೂಚಿಸಿದ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂಬುದನ್ನು ಸೇರಿದಂತೆ ಹಲವು ಷರತ್ತುಗಳನ್ನು ಅಧಿಸೂಚನೆಯಲ್ಲಿ ಪಟ್ಟಿ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries