HEALTH TIPS

ಪ್ರಧಾನಿ ಮೋದಿ ಇರಾನಿನ ಧೈರ್ಯ-ದಿಟ್ಟತನ ನೋಡಿ ಕಲಿಯಲಿ: TMC ಸಂಸದೆ ಮಹುವಾ ಮೊಯಿತ್ರಾ

ನವದೆಹಲಿ: ಧೈರ್ಯ ಮತ್ತು ದಿಟ್ಟತನ ಏನು ಎಂಬುದನ್ನು ಇರಾನ್ ಜಗತ್ತಿಗೆ ಕಲಿಸಿಕೊಟ್ಟಿದೆ' ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಬುಧವಾರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಹುವಾ, 'ಧೈರ್ಯ ಮತ್ತು ದಿಟ್ಟತನವನ್ನು ಇರಾನ್ ಜಗತ್ತಿಗೆ ತೋರಿಸಿಕೊಟ್ಟಿದೆ.

ಬಹುಶಃ ನಮ್ಮ ದೇಶದ ನಾಯಕತ್ವವು ಬೆದರಿಕೆ ಒಡ್ಡುವವರನ್ನು ಕೆಚ್ಚೆದೆಯಿಂದ ಎದುರಿಸಬೇಕು' ಎಂದಿದ್ದಾರೆ.

ಭಾರತವು ತನ್ನದೇ ಆದ ಕದನ ವಿರಾಮ, ತನ್ನದೇ ಆದ ವ್ಯಾಪಾರ ಒಪ್ಪಂದ ಮತ್ತು ತನ್ನದೇ ಆದ ಇಂಧನ ನೀತಿಯನ್ನು ಘೋಷಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಅಲ್ಲದೆ ಭಾರತದ ವಿದೇಶಾಂಗ ನೀತಿಯ ಕುರಿತು ಮಹುವಾ ಪ್ರಶ್ನಿಸಿದ್ದಾರೆ. ಬುಧವಾರದಂದು ಅಮೆರಿಕ ಹಾಗೂ ಇರಾನ್ ನಡುವೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿತ್ತು. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡಕ್ಕೆ ಇರಾನ್ ಜಗ್ಗಲಿಲ್ಲ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಹುವಾ ಪ್ರತಿಕ್ರಿಯಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 50ಕ್ಕೂ ಹೆಚ್ಚು ಸಲ ಹೇಳಿಕೆ ನೀಡಿದ್ದರು. ಆದರೆ ಭಾರತ ಹಾಗೂ ಪಾಕ್ ನಡುವಣ ಬಿಕ್ಕಟ್ಟಿನಲ್ಲಿ ಮೂರನೇ ದೇಶದ ಮಧ್ಯಪ್ರವೇಶವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries