HEALTH TIPS

ಕೊಲೆಯತ್ನ ಪ್ರಕರಣ-ಅಪಾಧಿಗೆ 12 ವರ್ಷ ಕಠಿಣ ಜೈಲು ಶಿಕ್ಷೆ, ದಂಡ

ಕಾಸರಗೋಡು: ವ್ಯಕ್ತಿಯ ಕೊಲೆಗೆ ಯತ್ನಿಸಿದ ಪ್ರಕರಣದ ಅಪರಾಧಿ ಪಾಡಿ ಗ್ರಾಮದ ಎಡುತೋಡು ನಿವಾಸಿ ಇ. ರಂಜಿತ್ ಅಲಿಯಾಸ್ ಬಂಗನ್ (29) ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶ ರಾಮು ರಮೇಶ್ ಚಂದ್ರಭಾನು ಅವರು ವಿವಿಧ ಸೆಕ್ಷನ್‍ಗಳಲ್ಲಾಗಿ ಒಟ್ಟು 12 ವರ್ಷ ಕಠಿಣ ಜೈಲು ಸಜೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ 9 ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

2021 ಎಪ್ರಿಲ್ 3ರಂದು ರಾತ್ರಿ ಎಡುತೋಡು ನಿವಾಸಿ ಸಿ.ಎಚ್. ರಾಘವ ಎಂಬವರನ್ನು ಚಾಕುವಿನಿಂದ ಎದೆ ಮತ್ತು ಕೈಗೆ ಇರಿದು ಕೊಲೆಗೆ ಲತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಪೆÇಲೀಸರು  ರಂಜಿತ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು.  

ಅಂದು ವಿದ್ಯಾನಗರ ಪೋಲೀಸ್ ಠಾಣೆಯ ಎಸ್‍ಐ ಆಗಿದ್ದ ನಿಬಿನ್ ಜೋಯ್ ಮೊದಲು ಪ್ರಕರಣದ ತನಿಖೆ ನಡೆಸಿದ್ದು, ನಂತರ ಅಂದಿನ ಇನ್ಸ್‍ಪೆಕ್ಟರ್ ಶ್ರೀಜಿತ್ ಕೊಡಿಯೇರಿ ನ್ಯಾಯಾಲಯಕ್ಕೆ  ದೋಷಾರೋಪ ಪಟ್ಟಿ ಸಲ್ಲಿಸಿದ್ದರು.   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries