ಕುಂಬಳೆ: ಕುಂಬಳೆ ಕೋಟೆಕಾರು ನಿವಾಸಿ ಸುನಿಲ್ ಕುಮಾರ್ (40)ಸಾವಿಗೆ ತಲೆಯಲ್ಲಿ ಉಂಟಾಗಿದ್ದ ರಕ್ತಸ್ರಾವ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್ ಮಂಡಲ ಸಮಿತಿ ಅಧ್ಯಕ್ಷ ರವಿ ಪೂಜಾರಿ ಅವರ ಸಹೋದರ ಸುನಿಲ್ ಕುಮಾರ್ ಅವರ ಮೃತದೇಹ ಕೋಟೆಕಾರಿನ ಮೈದಾನ ಸಮೀಪ ಕಂಡು ಬಂದಿದ್ದು, ಈ ಸಂದರ್ಭ ಮೃತದೇಹದ ಮೂಗಿನಿಂದ ರಕ್ತ ಹರಿಯುತ್ತಿತ್ತು. ಇದರಿಂದ ಸಾವಿನ ಬಗ್ಗೆ ನಿಗೂಢತೆ ವ್ಯಕ್ತವಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯಿಂದ ಸಂಶಯಕ್ಕೆ ತೆರೆಬಿದ್ದಿದದೆ.

