HEALTH TIPS

16 ರಂದು ಕೆ.ಯು.ಡಬ್ಲ್ಯೂ.ಜೆ. ದತ್ತಿನಿಧಿ ಪ್ರಶಸ್ತಿ ಪ್ರದಾನ, ಕನ್ನಡ ಸಂಸ್ಕøತಿ ಉತ್ಸವ

ಕುಂಬಳೆ: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಮೇ 16ರಂದು ಬೆಳಿಗ್ಗೆ 9ರಿಂದ ಸುಬ್ಬಯಕಟ್ಟೆ ಕೂಡಲು ಮೇಲರ್ಜಿದ ಕೂಡಲು ಅನುದಾನಿತ ಕಿ.ಪ್ರಾ.ಶಾಲೆ ವಠಾರದಲ್ಲಿ ನಡೆಯಲಿದೆ. 

ಕರ್ನಾಟಕ ರಾಜ್ಯ ಸಣ್ಣ ನೀರಾವರಿ ಸಚಿವ ಎಸ್.ಎಸ್. ಭೋಸರಾಜು ಸಮಾರಂಭ ಉದ್ಘಾಟಿಸುವರು. ನಿಯೋಜಿತ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಗಡಿನಾಡ ಸಾಧಕರನ್ನು ಸನ್ಮಾನಿಸುವರು. ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಪತ್ರಕರ್ತರ ಗುರುತಿನ ಚೀಟಿ ವಿತರಿಸುವರು.

ಶಾಫಿ ಬಂಡಸಾಲ ದುಬ್ಬೆ ಅವರ "ಮನದಾಳದಿಂದ" ಕೃತಿಯನ್ನು ಕರ್ನಾಟಕ ಕನ್ನಡ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ಬಿಡುಗಡೆಗೊಳಿಸುವರು.

ಸಾಬು ಅಬ್ರಹಾಂ, ಸೋಮಶೇಖರ್ ಜಿ.ಎಸ್., ಶಿವಾನಂದ ತಗಡೂರು, ಕರಣ್ ಬೆಳಗೇರಿ, ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಸಯ್ಯದ್ ಯು.ಕೆ ಸೈಫುಲ್ಲಾ ತಂಜಳ್, ಬಶೀರ್ ಕೋಲ್ಪಡ್ಕ, ಡಾ.ಎ.ಬಾಲಕೃಷ್ಣ, ಶ್ರೀನಿವಾಸ ಮಾಸ್ತರ್ ಕೆ.ಎಚ್., ಶಶಿಕಲ ರೈ, ಅಬ್ದುಲ್ ಅಝೀಝ್ ಸಿ.ಎಂ., ಮಂಜುನಾಥ ಆಳ್ವ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಡಾ.ಮಲ್ಲಿಕಾರ್ಜುನ ಎಸ್.ನಾಯ್ಕ್ ಮತ್ತಿತರರು ಭಾಗವಹಿಸುವರು.

 ಬೆಳಿಗ್ಗೆ 9.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪೈವಳಿಕೆ ಗ್ರಾಮದ ಅಧ್ಯಕ್ಷೆ ಬದ್ರುನ್ನಿಸಾ ಸರೀಂ ಮತ್ತು ಹಿರಿಯ ಸಮಾಜ ಸೇವಕ ಭಂಡಾರಗುತ್ತು ಸೀತಾರಾಮ ಶೆಟ್ಟಿ ಉದ್ಘಾಟಿಸುವರು.  9.30ರಿಂದ ಗೋನಾ ಸ್ವಾಮಿ, ಡಾ.ಎ.ಎಂ. ನಾಗೇಶ್ ಬೆಂಗಳೂರು ಮತ್ತು ಬಳಗದಿಂದ ಸುಮಧುರ ಸಂಗೀತ, 10ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries