ಬದಿಯಡ್ಕ: ನೀರ್ಚಾಲು ಸಮೀಪದ ಬುರುಡಡ್ಕ ಎಂಬ ಬಂಜರು ನೆಲವನ್ನು ಹದಗೊಳಿಸಿ, ಕೃಷಿಭೂಮಿಯನ್ನಾಗಿ ಪರಿವರ್ತಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ರತ್ನಾಕರ ಮಲ್ಲಮೂಲೆ ಅವರು ಕೇರಳ ಸರ್ಕಾರದ ಅರಣ್ಯ ಇಲಾಖೆ ನೀಡುವ ಪ್ರತಿಷ್ಠಿತ ವನಮಿತ್ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಡಾ. ರತ್ನಾಕರ ಮಲ್ಲಮೂಲೆ ಅವರು 'ಬನವಾಸಿ' ಎಂಬ ಹೆಸರಿನಲ್ಲಿ ಕಟ್ಟಿಬೆಳೆಸಿದ ಈ ಕೇಂದ್ರ ಹಸಿರಿನಿಂದ ಕಂಗೊಳಿಸುತ್ತಿದ್ದು, ಪರಿಸರಜಾಗೃತಿಯ ಸ್ಥಳವಾಗಿ ರೂಪುಗೊಂಡಿದ್ದು, ಇವರ ಮನೆ ಪರಿಸರಸ್ನೇಹಿಯಾಗಿದ್ದು, ಜನಾಕರ್ಷಣೆ ಕೇಂದ್ರವಾಗಿದೆ.
ಮಳೆನೀರನ್ನು ಅತ್ಯಂತ ವ್ಯವಸ್ಥಿತ ಹಗೂ ವೈಜ್ಞಾನಿಕ ಮಾದರಿಯಲ್ಲಿ ಸಂಗ್ರಹಿಸುವ ಮಳೆಕೊಯ್ಲು ಕೊಳ, ಸೂರ್ಯಚೈತನ್ಯವನ್ನು ಸದುಪಯೋಗಪಡಿಸುವ ಸೌರಶಕ್ತಿವ್ಯವಸ್ಥೆ, ಜಲಮರುಪೂರಣ ವ್ಯವಸ್ಥೆ, ಸಾಂಪ್ರದಾಯಿಕ ಬಾವಿಯ ಸಂರಕ್ಷಣೆಯ ಮೂಲಕ ಶುದ್ಧಜಲದ ಸದುಪಯೋಗ, ಅಮೂಲ್ಯ ತಳಿಗಳ ಔಷಧೀಯ ಸಸ್ಯಗಳ ತೋಟ, ವಿವಿಧ ಫಲಗಿಡಗಳ ಪೆÇೀಷಣೆ, ಕಂಗು, ತೆಂಗು, ಕರಿಮೆಣಸು, ವಿವಿಧ ತರಕಾರಿ ಗಿಡಗಳು ಸೇರಿದಂತೆ ಬಹುವಿಧ ಕೃಷಿಯೋಜನೆಗಳನ್ನು ಗುರುತಿಸಿ ವನಮಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.



