HEALTH TIPS

ಸಿರಿಬಾಗಿಲು-ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರ ಶೃಂಗೇರಿ ಜಗದ್ಗುರುಗಳಿಂದ ಲೋಕಾರ್ಪಣೆ

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದಲ್ಲಿ ನಿರ್ಮಿಸಲಾಗಿರುವ 'ಕೇಶವಾನಂದ ಭಾರತಿ ಸ್ಮೃತಿ ಮಂದಿರ'ದ ಲೋಕಾರ್ಪಣೆ ಸಮಾರಂಭ ಮೇ 12ರಂದು ನಡೆಯಲಿದೆ.ದಕ್ಷಿಣಮ್ಯಾಯ ಶ್ರೀ ಶೃಂಗೇರಿ ಶಾರದಾ ಪೀಠಾಧಿಪತಿ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ   ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಪರಿಪೂರ್ಣ ಕೃಪಾಶೀರ್ವಾದದೊಂದಿಗೆ, ತತ್ಕರಕಮಲ ಸಂಜಾತ ಪರಮಪೂಜ್ಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರೀಪಾದಂಗಳವರು ಲೋಕಾರ್ಪಣೆಗೈಯುವರು. 


ಬಹ್ಮೈಕ್ಯ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹರಸಿ 5ರುವುದಲ್ಲದೆ,   ಯಕ್ಷಗಾನ-ಕಲೆ-ಸಂಸ್ಕೃತಿ ಇತ್ಯಾದಿ ಉಳಿಸಿ ಬೆಳೆಸುವಲ್ಲಿ ಗಡಿನಾಡು ಕಾಸರಗೋಡಿನಲ್ಲಿ ದೊಡ್ಡ ಕೊಡುಗೆ ನೀಡಿರುವ ಪೂಜ್ಯರ ಹೆಸರಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು  ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರವನ್ನು ನಿರ್ಮಾಣಗೊಳಿಸಿದೆ.

 ಸಂಪೂರ್ಣ ನಿರ್ಮಾಣ ಕಾಮಗಾರಿ ವೆಚ್ಚವನ್ನು ಮಂಗಳೂರಿನ ನವ ಮಂಗಳೂರು ಬಂದರು ಪ್ರಾಧಿಕಾರ(ಎನ್.ಎಂ.ಪಿ.ಎ) ಸಂಸ್ಥೆಯು ಪ್ರಾಯೋಜಕತ್ವ ವಹಿಸಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries