HEALTH TIPS

ಜೂ. 1 ರಂದು ಶಾಲಾ ತರಗತಿ ಪುನರಾರಂಭ-ಶಾಲಾ ವಾಹನಗಳ ತಪಾಸಣಾ ಕಾರ್ಯಕ್ಕೆ ಚಾಲನೆ

ಕಾಸರಗೋಡು: ಕೇರಳದಾದ್ಯಂತ ಜೂನ್ 1 ರಂದು ಶಾಲಾ ತರಗತಿಗಳು ಪುನಾರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ವಾಹನಗಳ ತಪಾಸಣಾ ಕಾರ್ಯ ಆರಂಭಗೊಂಡಿತು.   ಕಾಞಂಗಾಡು ಸಬ್-ಆರ್‍ಟಿ ಕಚೇರಿ ವ್ಯಾಪ್ತಿಯ ಶಾಲೆಗಳಲ್ಲಿ ವಾಹನಗಳ ತಪಾಸಣೆ ಮತ್ತು ಸ್ಟಿಕ್ಕರ್ ಲಗತ್ತಿಸುವ ಕಾರ್ಯ ಈಗಾಗಲೇ   ಆರಂಭವಾಗಿದೆ. 

ಕಾಞಂಗಾಡು ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಶಾಲಾ ವಾಹನಗಳ ತಪಾಸಣೆಯಲ್ಲಿ 80 ವಾಹನಗಳನ್ನು ತಪಾಸಣೆ ನಡೆಸಲಾಯಿತು. ವಿವಿಧ ಕಾರಣಗಳಿಗಾಗಿ ಆರು ವಾಹನಗಳನ್ನು ವಾಪಾಸು ಕಳುಹಿಸಲಾಗಿದೆ. ಪರಿಶೀಲನೆಗೆ ಹಾಜರಾಗದ ತಾಲೂಕಿನ ಇತರ ಶಾಲೆಗಳ ವಾಹನಗಳನ್ನು ಮೇ 25 ರಂದು ಬೆಳಗ್ಗೆ 9 ಗಂಟೆಗೆ ಮೊದಲಾಗಿ ದುರ್ಗಾ ಹೈಯರ್ ಸೆಕೆಂಡರಿ ಶಾಲಾ ಮೈದಾನದಲ್ಲಿ ತಪಾಸಣೆಗೆ ಹಾಜರುಪಡಿಸುವಂತೆ ಕಾಞಂಗಾಡ್ ಸಹಾಯಕ ಆರ್‍ಟಿಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಞಂಗಾಡ್ ಜಂಟಿ ಆರ್‍ಟಿಒ ಪ್ರಭಾರಿ ಪಿ.ವಿ. ರತೀಶ್, ಮೋಟಾರ್ ವಾಹನ ನಿರೀಕ್ಷಕ ವಿ. ಪ್ರಜಿತ್, ಸಹಾಯಕ ಮೋಟಾರ್ ವಾಹನ ನಿರೀಕ್ಷಕರಾದ ಎಂ.ವಿ. ಪ್ರಭಾಕರನ್ ಮತ್ತು ಮ್ಯಾಥ್ಯೂ ವರ್ಗೀಸ್, ಕಚೇರಿ ಸಿಬ್ಬಂದಿ ಕೆ.ವಿ. ಮಿನಿ, ಸಿ.ವಿ. ಭವ್ಯ ಮತ್ತು ಕೆ.ವಿ. ಕೃಷ್ಣಕುಮಾರ್ ವಾಹನ ತಪಾಸಣೆಗೆ ನೇತೃತ್ವ ನೀಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries