ಕಾಸರಗೋಡು: ಕಾರುಗಳನ್ನು ಬಾಡಿಗೆಗೆ ಪಡೆದು ನಂತರ ಅದರ ಮಾಲಿಕರ ಅರಿವಿಗೆ ಬಾರದಂತೆ ಮಾರಾಟ ಮಾಡುವ ಜಾಲದ ಆರೋಪಿಯನ್ನು ವಿದ್ಯಾನಗರ ಠಾಣೆ ಇನ್‍ಸ್ಪೆಕ್ಟರ್ ಎಂ.ಪಿ.ವಿನೀಶ್ ಕುಮಾರ್ ಮತ್ತು ಎಸ್‍ಐ ಅನೂಪ್ ನೇತೃತ್ವದ ಪೆÇಲೀಸರ ತಂಡ ಬಂಧಿಸಿದೆ.
ಹೊಸದುರ್ಗ ಆವಿಕ್ಕರೆ ಬಿ.ಎಂ.ಜೆ ಕ್ವಾರ್ಟರ್ಸ್‍ನಲ್ಲಿ ವಾಸಿಸುತ್ತಿರುವ ಶಂಸುದ್ದೀನ್ ಮೊಹಮ್ಮದ್ (45) ಬಂಧಿತ. ಇತ್ತೀಚೆಗೆ ªಮುಟ್ಟತ್ತೋಡಿ ಎರ್ದುಂಕಡಡವು ಆಯಿಶಾ ಮಂಜಿಲ್‍ನ ಫಾತಿಮತ್ ಸೆರೀನಾ ಎಂಬವರ ಎರಡು ಕಾರು ಮತ್ತು ಮಹೀಂದ್ರ ಜೀಪನ್ನು ಬಾಡಿಗೆಗೆ ಪಡೆದುಕೊಂಡು ನಂತರ ಅವುಗಳನ್ನು ಅದರ ಮಾಲಕರಿಗೆ ತಿಳಿಯದೆ ಇತರರಿಗೆ ಮಾರಾಟ ಮಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ. ಆರೋಪಿಯನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾಸರಗೋಡು ಜಿಲ್ಲೆಯ ವಿದ್ಯಾನಗರ, ಕಾಸರಗೋಡು, ಬೇಕಲ, ಬದಿಯಡ್ಕ, ಕಣ್ಣೂರು ಜಿಲ್ಲೆಯ ಕಲ್ಯಾಷ್ಠೇರಿ ಸೇರಿದಂತೆ ರಾಜ್ಯದ ವಿವಿಧ ಪೆÇಲೀಸ್ ಠಾಣೆಗಳಲ್ಲಾಗಿ ಬಂಧಿತನ ವಿರುದ್ಧ ಇದೇ ರೀತಿಯ 80 ರಷ್ಟು ವಂಚನಾ ಪ್ರಕರಣ ದಾಖಲಾಗಿರುವುದಾಗಿ ಪೋಲೀಸರು ತಿಳಿಸಿದ್ದಾರೆ.

