ಕಾಸರಗೋಡು: ಮೇಲ್ಪರಂಬ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಹತ್ತೊಂಬತ್ತರ ಹರೆಯದ ಯುವಕ ನೀಡಿದ ದೂರಿನನ್ವಯ 36ರ ಹರೆಯದ ಮಹಿಳೆ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 19ರ ಹರೆಯದ ಬಾಲಕ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ದೂರುದಾತ ಪ್ರಸಕ್ತ 19ರ ಹರೆಯದವನಾಗಿದ್ದು, ತನಗೆ 16 ವರ್ಷ ಪ್ರಾಯವಿದ್ದಾಗ ಆಟೋದಲ್ಲಿ, ಮಹಿಳೆಯ ಬೆಡ್‍ರೂಂನಲ್ಲಿ ಹಾಗೂ 2024 ಎಪ್ರಿಲ್ ತಿಂಗಳಲ್ಲಿ ತಿರೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಲೂ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಠಾಣೆ ಪೆÇಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

