ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ವಲಸೆ ಏಜೆನ್ಸಿಯ ವರದಿಯ ಪ್ರಕಾರ 2024ರಲ್ಲಿ ದೇಶದಿಂದ ದೇಶಕ್ಕೆ ಅಗ್ರ 10 ವಲಸೆ ಕಾರಿಡಾರ್ ಗಳಲ್ಲಿ ಭಾರತ-ಯುಎಇ ಮತ್ತು ಭಾರತ-ಅಮೆರಿಕ ವಲಸೆ ಕಾರಿಡಾರ್ ಗಳು ಸೇರಿವೆ.
ಭಾರತ-ಯುಎಇ ಮಾರ್ಗವು ವಿಶ್ವದ 5ನೇ ಅತೀ ದೊಡ್ಡ ವಲಸೆ ಕಾರಿಡಾರ್ ಆಗಿದ್ದು 30 ಲಕ್ಷಕ್ಕೂ ಭಾರತೀಯರು ಯುಎಇಯಲ್ಲಿ ವಾಸಿಸುತ್ತಿದ್ದಾರೆ .
ಭಾರತದಿಂದ ಅಮೆರಿಕಕ್ಕೆ ವಲಸೆ ಕಾರಿಡಾರ್ ವಿಶ್ವದಲ್ಲಿ 6ನೇ ಅತೀ ದೊಡ್ಡ ವಲಸೆ ಕಾರಿಡಾರ್ ಆಗಿದ್ದು 2024ರಲ್ಲಿ ಸುಮಾರು 32 ಲಕ್ಷ ಭಾರತೀಯ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದರು. ಆದರೆ ಇತ್ತೀಚಿನ ಅಂದಾಜಿನ ಪ್ರಕಾರ ಈ ಸಂಖ್ಯೆ ಸುಮಾರು 50ಲಕ್ಷಕ್ಕೆ ತಲುಪಿದೆ. ಹೆಚ್ಚು ನುರಿತ ಕೆಲಸಗಾರರು ಮತ್ತು ವಿದ್ಯಾರ್ಥಿಗಳಿಂದಾಗಿ ಅಮೆರಿಕಕ್ಕೆ ಭಾರತೀಯರ ವಲಸೆಯು ಸ್ಥಿರವಾಗಿ ಪ್ರಗತಿಯಾಗುತ್ತಿದೆ ಎಂದು ವರದಿ ಹೇಳಿದೆ.

