HEALTH TIPS

ಸ್ಮಾರ್ಟ್‌ಫೋನಿನಲ್ಲಿ ಡಿಲೀಟ್‌ ಆದ Photos ಮರಳಿ ಪಡೆಯುವುದು ಸುಲಭ! ಈ ವಿಧಾನ ಉತ್ತಮ

 ಪ್ರಸ್ತುತ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಅನೇಕರು ಫೋಟೋಗಳನ್ನು (Photos) ತಮ್ಮ ನೆನಪಿಗಾಗಿ ಫೋನಿನಲ್ಲಿ ಸ್ಟೋರ್‌ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಅಚಾನಕ್ ಆಗಿ ಫೋಟೋಗಳನ್ನು ಡಿಲೀಟ್ ಮಾಡಿಬಿಡುತ್ತಾರೆ. ಬ್ಯಾಕಪ್ ಇಲ್ಲದಿದ್ದರೆ ಅವು ಮರಳಿ ಸಿಗುವುದಿಲ್ಲ ಎಂದು ನಾವು ಭಾವಿಸುತ್ತಾರೆ. ಆದರೆ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಡಿಲೀಟ್ ಆದ ಫೋಟೋಗಳನ್ನು ಮರುಪಡೆಯುವ ಸಾಧ್ಯತೆ ಇದೆ. ಹಾಗಾದರೆ ಮೊಬೈಲ್‌ನಲ್ಲಿ ಡಿಲೀಟ್‌ ಆದ ಫೋಟೋಗಳನ್ನು ಮತ್ತೆ ಮರಳಿ ಪಡೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ.


ಡಿಲೀಟ್‌ ಆದ Photos ಮತ್ತೆ ಪಡೆಯಲು ಹೀಗೆ ಮಾಡಿ

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನಿನ ಗ್ಯಾಲರಿ ಆಪ್‌ನ Trash ಅಥವಾ Recently Deleted ಫೋಲ್ಡರ್ ಅನ್ನು ಚೆಕ್ ಮಾಡಬೇಕು. ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಡಿಲೀಟ್ ಮಾಡಿದ ಫೋಟೋಗಳು 30 ದಿನಗಳವರೆಗೆ ಅಲ್ಲಿ ಸೇವ್ ಆಗಿರುತ್ತವೆ. Trash ಆಯ್ಕೆಗೆ ಹೋಗಿ ಅಲ್ಲಿ ಬೇಕಾದ ಫೋಟೋ ಸೆಲೆಕ್ಟ್ ಮಾಡಿ Restore ಆಯ್ಕೆ ಮಾಡಿದರೆ ಫೋಟೋಗಳು ಸುಲಭವಾಗಿ ಮರಳಿ ಗ್ಯಾಲರಿಗೆ ಬರುತ್ತವೆ.

Photos

ಹಾಗೆಯೇ ಬಳಕೆದಾರರು Google Photos ಆಪ್ ಮೂಲಕ ಸಹ ಫೋಟೋ ರೀಸ್ಟೋರ್ ಮಾಡುವ ಅವಕಾಶ ಇದೆ. ಇದಕ್ಕಾಗಿ ಮೊದಲಿಗೆ Google Photos ಆಪ್ ತೆರೆಯಿರಿ ಬ್ಯಾಕಪ್ ಆಫ್ ಇದ್ದರೂ ಕೆಲವು ಫೋಟೋಗಳು Bin ಫೋಲ್ಡರ್‌ನಲ್ಲಿ ಇರಬಹುದು. Google Photos ನಲ್ಲಿ ಕೂಡ 30 ರಿಂದ 60 ದಿನಗಳವರೆಗೆ ಡಿಲೀಟ್ ಆದ ಫೈಲ್‌ಗಳು ಉಳಿಯುವ ಸಾಧ್ಯತೆ ಇದೆ. ಒಂದು ವೇಳೆ ಫೋಟೋಗಳು ಇದ್ದರೆ Restore ಮಾಡಿ.

ಡಿಲೀಟ್ ಆದ ಫೋಟೋಗಳನ್ನು ಹಿಂಪಡೆಯುವ ಇನ್ನೊಂದು ಮುಖ್ಯ ವಿಧಾನ ಎಂದರೆ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್ ಬಳಸುವುದನ್ನು ತಕ್ಷಣ ನಿಲ್ಲಿಸುವುದು. ಯಾಕೆಂದರೆ ಹೊಸ ಫೋಟೋ ಅಥವಾ ಆಪ್‌ ಇನ್‌ಸ್ಟಾಲ್ ಮಾಡಿದರೆ ಹಳೆಯ ಡೇಟಾ ಓವರ್‌ರೈಟ್ ಆಗುವ ಸಾಧ್ಯತೆ ಇದೆ. ಇದರಿಂದ ಡಿಲೀಟ್ ಆದ ಫೋಟೋಗಳನ್ನು ಮರುಪಡೆಯುವುದು ಕಷ್ಟವಾಗಬಹುದು.

ಕಂಪ್ಯೂಟರ್ ಬಳಕೆ ಮೂಲಕ ಡೇಟಾ ರಿಕವರಿ ಸಾಫ್ಟ್‌ವೇರ್‌ಗಳನ್ನು ಪ್ರಯತ್ನಿಸುವ ಮೂಲಕ ಸಹ ಫೋಟೋ ಮರಳಿ ಪಡೆಯುವ ಪ್ರಯತ್ನ ಮಾಡಬಹುದು. ಉದಾಹರಣೆಗೆ DiskDigger ಅಥವಾ Dr.Fone ಮುಂತಾದ ಟೂಲ್‌ಗಳು ಫೋನ್‌ನ ಒಳಗಿನ ಮೆಮೊರಿಯನ್ನು ಸ್ಕ್ಯಾನ್ ಮಾಡಿ ಡಿಲೀಟ್ ಆದ ಫೋಟೋಗಳನ್ನು ಸರ್ಚ್ ಮಾಡಲು ಸಹಾಯ ಮಾಡುತ್ತವೆ. ಕೆಲವು ಆಪ್‌ಗಳಿಗೆ ರೂಟ್ ಆಕ್ಸೆಸ್ ಬೇಕಾಗಬಹುದು ಆದ್ದರಿಂದ ಎಚ್ಚರಿಕೆಯಿಂದ ಬಳಸಿ.

ಹಾಗೆಯೇ ನಿಮ್ಮ ಮೊಬೈಲ್‌ನಲ್ಲಿ ಫೈಲ್ ಮ್ಯಾನೇಜರ್ ಆಪ್ ಇದ್ದರೆ ಅದರಲ್ಲಿ DCIM ಅಥವಾ Pictures ಫೋಲ್ಡರ್‌ಗಳನ್ನು ಚೆಕ್ ಮಾಡಿ. ಕೆಲವೊಮ್ಮೆ ಫೋಟೋಗಳು ಅಲ್ಲಿ ಸೇವ್ ಆಗಿರುವ ಸಾಧ್ಯತೆಗಳು ಇವೆ. ಮುಂದೆ ಇಂತಹ ಸಮಸ್ಯೆಗಳು ಆಗದಂತೆ ತಡೆಯಲು ನೀವು ಯಾವಾಗಲೂ ಕ್ಲೌಡ್ ಬ್ಯಾಕಪ್ ಆನ್ ಮಾಡಿಟ್ಟುಕೊಳ್ಳುವುದು ಉತ್ತಮ. Google Photos ಅಥವಾ ಇತರ ಕ್ಲೌಡ್ ಸೇವೆಗಳು ನಿಮ್ಮ ಫೋಟೋಗಳನ್ನು ಸ್ವಯಂ ಬ್ಯಾಕಪ್ ಮಾಡುತ್ತವೆ. ಇದರಿಂದ ಫೋಟೋಗಳು ಡಿಲೀಟ್ ಆದರೂ ಸುಲಭವಾಗಿ ಮರಳಿ ಪಡೆಯಬಹುದು.






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries