HEALTH TIPS

ರಷ್ಯದ ಕ್ಷಿಪಣಿ, ಡ್ರೋನ್ ದಾಳಿಗೆ ಉಕ್ರೇನ್ ತತ್ತರ: ಕನಿಷ್ಠ 24 ಮಂದಿ ಸಾವು

 ಕೀವ್: ಗುರುವಾರದಿಂದ ಶುಕ್ರವಾರ ಬೆಳಗ್ಗಿನವರೆಗೆ ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಪ್ರಮುಖ ನಗರಗಳನ್ನು ಗುರಿಯಾಗಿಸಿ ರಷ್ಯ ಕ್ಷಿಪಣಿ ಮತ್ತು ಡ್ರೋನ್‍ಗಳ ಸುರಿಮಳೆಗರೆದಿದ್ದು ಕನಿಷ್ಠ 24 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.


ರಷ್ಯಾವು 675 ಡ್ರೋನ್‍ಗಳು ಹಾಗೂ 56 ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಕೀವ್ ನಗರ ಮುಖ್ಯ ಗುರಿಯಾಗಿತ್ತು.

ತನ್ನ ವಾಯುರಕ್ಷಣಾ ವ್ಯವಸ್ಥೆಯು 652 ಡ್ರೋನ್‍ಗಳು ಹಾಗೂ 41 ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಹಲವು ಕಟ್ಟಡಗಳು, ಮನೆಗಳು, ಅಂಗಡಿಗಳು ಬೆಂಕಿಯ ಜ್ವಾಲೆಗೆ ಸಿಲುಕಿದ್ದು ಜನರು ಜೀವ ಉಳಿಸಿಕೊಳ್ಳಲು ಮೆಟ್ರೋ ಸ್ಟೇಷನ್‍ಗಳಿಗೆ ಓಡಿದ್ದಾರೆ. ಮನೆ, ಶಾಲೆ, ಪಶು ಆಸ್ಪತ್ರೆ, ನಾಗರಿಕ ಮೂಲ ಸೌಕರ್ಯ ಸೇರಿದಂತೆ ಕೀವ್‍ನಲ್ಲಿ 20 ಸ್ಥಳಗಳಿಗೆ ತೀವ್ರ ಹಾನಿಯಾಗಿದೆ. 9 ಅಂತಸ್ತಿನ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಮೂವರು ಮಕ್ಕಳು, ನಾಲ್ಕು ಮಹಿಳೆಯರು ಸೇರಿದಂತೆ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದು 45 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣದ ಪ್ರದೇಶಗಳಾದ ಒಡೆಸಾ, ಖೆರ್ಸಾನ್, ಪೂರ್ವದ ಖಾರ್ಕಿವ್‍ನಲ್ಲೂ ಹಲವರು ಗಾಯಗೊಂಡ ಮಾಹಿತಿಯಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿದೆ ಎಂದು ಉಕ್ರೇನ್‍ನ ವಾಯುಪಡೆ ಶುಕ್ರವಾರ ಹೇಳಿದೆ.

ಕದನ ವಿರಾಮದ ಬಗ್ಗೆ ಪ್ರಯತ್ನ ಮುಂದುವರಿದಿರುವಂತೆಯೇ ರಷ್ಯ ನಡೆಸಿದ ತೀವ್ರ ವೈಮಾನಿಕ ದಾಳಿಯನ್ನು ಬ್ರಿಟನ್, ಫ್ರಾನ್ಸ್, ಯುರೋಪಿಯನ್ ಯೂನಿಯನ್, ಫಿನ್ಲ್ಯಾಂಡ್, ನೆದರ್ಲ್ಯಾಂಡ್ ಹಾಗೂ ಇತರ ಹಲವು ರಾಷ್ಟ್ರಗಳು ಖಂಡಿಸಿವೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries