HEALTH TIPS

ರಾಜೀವ್ ಚಂದ್ರಶೇಖರ್‌ ಕಚೇರಿ 24 ಗಂಟೆಯೂ ಓಪನ್; ತುರ್ತು ಆಯಂಬುಲೆನ್ಸ್ ಸೇವೆ ಆರಂಭ

ತಿರುವನಂತಪುರಂ: ಕೇರಳದ ನೂತನ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ತಾವು ಗೆದ್ದ ನೇಮಂ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆ ತರಲು ಮುಂದಾಗಿದ್ದಾರೆ. 24 ಗಂಟೆಗಳೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು 24 ಗಂಟೆಗಳ ಶಾಸಕರ ಕಚೇರಿ ಘೋಷಣೆ ಮಾಡಿದ್ದಾರೆ.

ಇದಲ್ಲದೆ ಕ್ಷೇತ್ರದೊಳಗೆ ದಿನವಡೀ ಜನರ ತುರ್ತು ಆರೋಗ್ಯಕ್ಕೆ ಆಯಂಬುಲೆನ್ಸ್‌ ಸೇವೆ ಒದಗಿಸಲು ಉದ್ದೇಶಿಸಲಾಗಿದ್ದು, ಆಯಂಬುಲೆನ್ಸ್‌, ಶಾಸಕರ ಕಚೇರಿಯಿಂದಲೇ ಕಾರ್ಯನಿರ್ವಹಿಸಲಿದೆ. ಜೂನ್‌ನಿಂದ ಸೇವೆ ಆರಂಭಿಸಲಿದೆ.

ಕಚೇರಿಯಿಂದ ತುರ್ತು ಸೇವೆ

ಕ್ಷೇತ್ರದ ಕರುಮಂ ಮತ್ತು ಕಡಾಡಿ ವಾರ್ಡ್‌ಗಳಲ್ಲಿ ಗುರುವಾರ ನಡೆದ 'ನಂದಿ ನೇಮಂ' ಸಾರ್ವಜನಿಕ ಸ್ವಾಗತ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ರಾಜೀವ್‌ ಚಂದ್ರಶೇಖರ್‌, 'ಕಚೇರಿಯಿಂದ ತುರ್ತು ಸೇರಿ ಯಾವುದೇ ಸಮಯದಲ್ಲಿ ಜನರು ಸಹಾಯ ಪಡೆಯಬಹುದು. ಆಯಂಬುಲೆನ್ಸ್‌ ತಡರಾತ್ರಿ ಆರೋಗ್ಯ ಸಮಸ್ಯೆಗೆ ಸಕಾಲಿಕ ಸಾರಿಗೆ ಒದಗಿಸಲಿದೆ. ನೇಮಂ ಜನರು ತಮ್ಮ ಜೀವನದಲ್ಲಿ ಬದಲಾವಣೆಗೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಶಾಸಕರ ಕಚೇರಿ ಜನರು ಹಗಲು, ರಾತ್ರಿ ಎನ್ನದೆ ಯಾವುದೇ ಹಿಂಜರಿಕೆಯಿಲ್ಲದೆ ತಲುಪುವ ಸ್ಥಳವಾಗಬೇಕು' ಎಂದರು. ಅಲ್ಲದೆ ಜನರು ತಮ್ಮನ್ನು ಫೋನ್‌, ಇ-ಮೇಲ್‌ ಮೂಲಕ ಸಂಪರ್ಕಿಸಬಹುದು ಎಂದು ಹೇಳಿದರು.

ಕೇರಳ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ 3 ಬಿಜೆಪಿ ಶಾಸಕರಲ್ಲಿ ರಾಜೀವ್‌ ಚಂದ್ರಶೇಖರ್‌ ಸಹ ಒಬ್ಬರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries