ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯದ ಕರೆಗೆ ಸ್ಪಂದಿಸಿರುವ ಸುಪ್ರೀಂ ಕೋರ್ಟ್, ಸೋಮವಾರ ಮತ್ತು ಶುಕ್ರವಾರದಂದು ವರ್ಚುವಲ್ ಆಗಿ ವಿಚಾರಣೆಗಳನ್ನು ನಡೆಸಲು ನಿರ್ಧರಿಸಿದೆ ಎಂದು 'ಬಾರ್ ಅಂಡ್ ಬೆಂಚ್' ವರದಿ ಮಾಡಿದೆ.
ಈಚೆಗೆ ಹೈದರಾಬಾದ್‌ನಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಉಳಿಸುವಂತೆ ಜನರಲ್ಲಿ ಮನವಿ ಮಾಡಿದ್ದರು.
ಮೋದಿ ಅವರ ನಿರ್ದೇಶನದಂತೆ ವಾರದಲ್ಲಿ ಎರಡು ದಿನ 'ವರ್ಕ್ ಫ್ರಮ್ ಹೋಮ್' ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರತಿ ಮಂಗಳವಾರದಿಂದ ಗುರುವಾರದವರೆಗೆ ಪ್ರಕರಣಗಳ ವಿಚಾರಣೆಗಾಗಿ 'ಹೈಬ್ರಿಡ್' ಮಾದರಿಯನ್ನು (ನೇರ ಮತ್ತು ವರ್ಚುವಲ್ ಎರಡೂ ಲಭ್ಯವಿರುವ ವ್ಯವಸ್ಥೆ) ಅಳವಡಿಸಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಮಂಗಳವಾರ, ಬುಧವಾರ ಮತ್ತು ಗುರುವಾರ ವಕೀಲರು ಹಾಗೂ ದೂರುದಾರರು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವ ಅಥವಾ ವರ್ಚುವಲ್ ಆಗಿ ಭಾಗವಹಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

