HEALTH TIPS

ಚುನಾವಣೆಯ ಬಳಿಕ ಬೆಲೆ ಏರಿಕೆ ಬಿಸಿ: ಪೆಟ್ರೋಲ್, ಡೀಸೆಲ್‌ ದರ ಏರಿಕೆಗೆ ಕಾರಣಗಳಿವು

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕವಾಗಿ ಇಂಧನ ಬೆಲೆಗಳು ತೀವ್ರ ಏರುತ್ತಿರುವಂತೆಯೇ, ದೇಶದಲ್ಲಿ (ಭಾರತ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹3 ಹೆಚ್ಚಿಸಲಾಗಿದೆ.

ತೈಲ ಮಾರಾಟ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಇಂಧನ ದರ ಏರಿಕೆಗೆ ಅನುಗುಣವಾಗಿ ದರವನ್ನು ಏರಿಕೆ ಮಾಡಿವೆ.

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹94.77 ನಿಂದ ₹97.77ಕ್ಕೆ ಏರಿಕೆಯಾಗಿದೆ. ಡೀಸೆಲ್ ಬೆಲೆ ₹87.67 ನಿಂದ ₹90.67ಕ್ಕೆ ಏರಿಕೆಯಾಗಿದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಚುನಾವಣೆಯ ಬಳಿಕ ಬೆಲೆ ಏರಿಕೆ ಬಿಸಿ: ಪೆಟ್ರೋಲ್, ಡೀಸೆಲ್‌ ದರ ಏರಿಕೆಗೆ ಕಾರಣಗಳಿವು

ಒಂದು ಸಾಲಿನಲ್ಲಿಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಬೆಲೆ ಏರಿಕೆಯಾಗಿದ್ದು, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಬೆಲೆಯನ್ನು ಲೀಟರ್‌ ಅಥವಾ ಕೆಜಿಗೆ ₹2 ರಿಂದ ₹3 ಹೆಚ್ಚಿಸಲಾಗಿದೆ.ಪ್ರಮುಖ ಅಂಶಗಳು• ಇಂಧನ ದರಗಳ ಏರಿಕೆಜಾಗತಿಕ ಮಾರುಕಟ್ಟೆಯ ದರ ಏರಿಕೆಗೆ ಅನುಗುಣವಾಗಿ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ₹3 ಹೆಚ್ಚಿಸಲಾಗಿದೆ.• ಸಿಎನ್‌ಜಿ ಬೆಲೆ ಹೆಚ್ಚಳಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ ₹2 ಹೆಚ್ಚಿಸಲಾಗಿದೆ.• ಬೆಲೆ ಏರಿಕೆಗೆ ಮುಖ್ಯ ಕಾರಣಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಭೌಗೋಳಿಕ ರಾಜಕೀಯ ಸಂಘರ್ಷ ಮತ್ತು ಹೋರ್ಮುಜ್ ಜಲಸಂಧಿ ಮುಚ್ಚಿದ್ದರಿಂದ ಜಾಗತಿಕ ಇಂಧನ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡಿದೆ.• ಸರ್ಕಾರದ ಸ್ಪಷ್ಟನೆದೇಶದಲ್ಲಿ ಇಂಧನದ ಯಾವುದೇ ಕೊರತೆಯಿಲ್ಲ ಮತ್ತು ಸುಮಾರು 60 ದಿನಗಳಿಗೆ ಸಾಕಾಗುವಷ್ಟು ಪೆಟ್ರೋಲಿಯಂ ದಾಸ್ತಾನು ಇದೆ ಎಂದು ಸರ್ಕಾರ ಭರವಸೆ ನೀಡಿದೆ.• ತೈಲ ಕಂಪನಿಗಳ ಆರ್ಥಿಕ ಹೊರೆಅಂತರರಾಷ್ಟ್ರೀಯ ದರ ಮತ್ತು ದೇಶೀಯ ಮಾರಾಟ ದರದ ನಡುವಿನ ಅಂತರ ಹೆಚ್ಚಾಗಿದ್ದರಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾರಿ ನಷ್ಟದ ಆತಂಕ ಎದುರಿಸುತ್ತಿವೆ.ಪ್ರಮುಖ ಅಂಕಿಅಂಶಗಳು₹3ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ₹2ಸಿಎನ್‌ಜಿ ಬೆಲೆ ಏರಿಕೆ60 ದಿನಗಳುಪೆಟ್ರೋಲ್ ದಾಸ್ತಾನು ಅವಧಿ45 ದಿನಗಳುಎಲ್‌ಪಿಜಿ ದಾಸ್ತಾನು ಅವಧಿ4 ವರ್ಷದರ ಪರಿಷ್ಕರಣೆ ಸ್ಥಗಿತವಿದ್ದ ಅವಧಿಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

4 ವರ್ಷಗಳ ಬಳಿಕ ದರ ಏರಿಕೆ:

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಳೆದ 4 ವರ್ಷಗಳಿಂದ (2022ರ ಏಪ್ರಿಲ್) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರಲಿಲ್ಲ. ಆದರೆ ಲೋಕಸಭಾ ಚುನಾವಣೆಗೆ ಸ್ವಲ್ಪ ಮೊದಲು ಅಂದರೆ 2024ರ ಮಾರ್ಚ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ₹2 ಕಡಿತಗೊಳಿಸಲಾಗಿತ್ತು.

ಸಿಎನ್‌ಜಿ ಬೆಲೆಯೂ ಏರಿಕೆ:

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬೆನ್ನಲ್ಲೇ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಬೆಲೆಯೂ ಏರಿಕೆಯಾಗಿದೆ. ಪ್ರತಿ ಕೆಜಿ ಸಿಎನ್‌ಜಿ ದರ ₹2 ಹೆಚ್ಚಳವಾಗಿದೆ. ದೆಹಲಿಯಲ್ಲಿ ಸಿಎನ್‌ಜಿ ದರ (ಪ್ರತಿ ಕೆ.ಜಿಗೆ) ₹2 ಹೆಚ್ಚಿಸಲಾಗಿದ್ದು, ₹77.09ಗಳಿಂದ ₹79.09ಕ್ಕೆ ಏರಿಕೆಯಾಗಿದೆ.

ಇದಕ್ಕೂ ಮೊದಲು, ಮುಂಬೈನಲ್ಲಿ ಮಹಾನಗರ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ಸಿಎನ್‌ಜಿ ಬೆಲೆಯನ್ನು ಕೆ.ಜಿಗೆ ₹2 ರೂ ಹೆಚ್ಚಿಸಿತ್ತು. ಪರಿಷ್ಕೃತ ದರ ₹84 ಬುಧವಾರದಿಂದಲೇ ಜಾರಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿ ಮುಚ್ಚಿದ್ದದಿಂದ ಜಾಗತಿಕ ವಾಣಿಜ್ಯ ವ್ಯವಹಾರದ ದಿಕ್ಕೇ ಬದಲಾಗಿದೆ. ಆದಾಗಿಯ್ಯೂ ದೇಶದಲ್ಲಿ ಯಾವುದೇ ಇಂಧನ ಕೊರತೆಯಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೇ ಇಂಧನ ಬಳಕೆಯ ಮೇಲೆ ಮಿತಿ ಹೇರುವ ಅಥವಾ ಪಡಿತರ ವ್ಯವಸ್ಥೆ ಪರಿಚಯಿಸುವ ಯಾವುದೇ ಆಲೋಚನೆ ಸದ್ಯಕ್ಕೆ ಇಲ್ಲ ಎಂದೂ ಪ್ರತಿಪಾದಿಸಿದೆ.ಇಂಧನ ಕೊರತೆಯಿಲ್ಲ-ಕೇಂದ್ರ

ಗಾಬರಿಪಡುವ ಅಗತ್ಯವಿಲ್ಲ:

ದೇಶದಲ್ಲಿ ಇಂಧನದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಭಯಪಡುವ ಅಗತ್ಯವಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (MoPNG) ಕಾರ್ಯದರ್ಶಿ ನೀರಜ್ ಮಿತ್ತಲ್ ಇತ್ತೀಚೆಗೆ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ(ಸಿಐಐ) ವಾರ್ಷಿಕ ವ್ಯವಹಾರ ಶೃಂಗಸಭೆಯಲ್ಲಿ ಹೇಳಿದ್ದರು.

ಇಂಧನ ಬಳಕೆಯ ಮೇಲೆ ಮಿತಿ ಹೇರುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ. ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ನಿರಂತರ ಏರಿಳಿತದ ನಡುವೆಯೂ ಭಾರತವು ಹೆಚ್ಚಿನ ಪ್ರಮಾಣದ ಸಂಗ್ರಹವನ್ನು ಹೊಂದಿದೆ. ಪೆಟ್ರೋಲ್/ಡೀಸೆಲ್ ಸುಮಾರು 60 ದಿನಗಳಿಗೆ ಆಗುವಷ್ಟು, ಎಲ್‌ಪಿಜಿ (ಗ್ಯಾಸ್) ಸುಮಾರು 45 ದಿನಗಳಿಗೆ ಆಗುವಷ್ಟು ಇಂಧನ ದಾಸ್ತಾನು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ..

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹ 94.77 ಗಳಿಂದ ₹97.77 ಕ್ಕೆ ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ ₹87.67 ಗಳಿಂದ ₹90.67ಕ್ಕೆ ಏರಿಕೆಯಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ (ಶುಕ್ರವಾರ) ಜಾರಿಗೆ ಬಂದಿವೆ.

ವಿವಿಧ ನಗರಗಳಲ್ಲಿ ಭಿನ್ನ ದರ

ಸ್ಥಳೀಯ ಸುಂಕಗಳಲ್ಲಿನ ವ್ಯತ್ಯಾಸಗಳಿಂದಾಗಿ ದೇಶದಲ್ಲಿನ ವಿವಿಧ ನಗರಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಭಿನ್ನತೆಯಿದೆ. ಹಲವು ನಗರಗಳಲ್ಲಿ ಇಂಧನ ಬೆಲೆ ಲೀಟರ್‌ಗೆ ₹100ಗಿಂತ ಹೆಚ್ಚಾಗಿದೆ.

ಕೋಲ್ಕತ್ತದಲ್ಲಿ, ಪೆಟ್ರೋಲ್ ದರ ಲೀಟರ್‌ಗೆ ₹3.29 ಏರಿಕೆಯಾಗಿ ₹108.74ಕ್ಕೆ ಮಾರಾಟವಾಗುತ್ತಿದೆ. ಡೀಸೆಲ್‌ ದರ ಲೀಟರ್‌ಗೆ ₹3.11 ಗಳಷ್ಟು ಏರಿಕೆಯಾಗಿ ₹95.13ಕ್ಕೆ ತಲುಪಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹3.14 ಏರಿಕೆಯಾಗಿ ₹106.68ಕ್ಕೆ ತಲುಪಿದೆ. ಡೀಸೆಲ್ ಬೆಲೆ ₹3.11 ಏರಿಕೆಯಾಗಿ ₹93.14ಕ್ಕೆ ತಲುಪಿದೆ. ‌

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹2.83 ಏರಿಕೆಯಾಗಿ ₹103.67 ಆಗಿದ್ದು, ಡೀಸೆಲ್ ದರ ಲೀಟರ್‌ಗೆ ₹2.86 ಏರಿಕೆಯಾಗಿ ₹95.25ಕ್ಕೇರಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಅನಿವಾರ್ಯವೇ?:

ಲೋಕಸಭಾ ಚುನಾವಣೆಗೆ ಮುನ್ನ ಅಂದರೆ 2024ರ ಮಾರ್ಚ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ₹2 ಕಡಿತಗೊಳಿಸಲಾಗಿತ್ತು. ಅದನ್ನು ಬಿಟ್ಟರೆ ಕಳೆದ 4 ವರ್ಷಗಳಿಂದ (2022ರ ಏಪ್ರಿಲ್) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರಲಿಲ್ಲ.

ರಷ್ಯಾದ ಉಕ್ರೇನ್ ಯುದ್ಧದ ಬಳಿಕ ಅಂತರರಾಷ್ಟ್ರೀಯ ಕಚ್ಚಾ ತೈಲ ದರಗಳು ಏರಿಕೆಯಾಗಿದ್ದವು. ಬೆಲೆಗಳಲ್ಲಿನ ತೀವ್ರ ಏರಿಕೆಯಿಂದ ದೇಶೀಯ ಗ್ರಾಹಕರನ್ನು ರಕ್ಷಿಸಲು ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ 2022ರ ಏಪ್ರಿಲ್‌ನಲ್ಲಿ ದೈನಂದಿನ ಇಂಧನ ಬೆಲೆ ಪರಿಷ್ಕರಣೆ ಸ್ಥಗಿತಗೊಳಿಸಿದ್ದವು.

2022-23ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಮೂರು ಕಂಪನಿಗಳು ಭಾರಿ ನಷ್ಟ ಅನುಭವಿಸಿದ್ದವು. ಆದರೆ ನಂತರದ ತಿಂಗಳುಗಳಲ್ಲಿ ಕಚ್ಚಾ ತೈಲದ ಬೆಲೆ ತಗ್ಗಿದ್ದರಿಂದ ಅವು ಚೇತರಿಸಿಕೊಂಡಿದ್ದವು.

ಸದ್ಯ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಮತ್ತೊಮ್ಮೆ ಜಾಗತಿಕ ಕಚ್ಚಾ ತೈಲ ಬೆಲೆಗಳ ತೀವ್ರ ಏರಿಕೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾ ಯುದ್ಧ ಆರಂಭವಾಗುವ ಮೊದಲು ಫೆಬ್ರುವರಿಯಲ್ಲಿ ಭಾರತದ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಸರಾಸರಿ 69 ಡಾಲರ್‌ ನಷ್ಟಿತ್ತು. ನಂತರದ ತಿಂಗಳುಗಳಲ್ಲಿ, ಸರಾಸರಿ ಬೆಲೆ ತೀವ್ರವಾಗಿ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 113-114 ಡಾಲರ್‌ಗೆ ತಲುಪಿತ್ತು.

ಆದಾಗ್ಯೂ ಭಾರತದಲ್ಲಿ ಇಲ್ಲಿಯವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರಲಿಲ್ಲ. ಬದಲಾಗಿ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ತೆರಿಗೆ ಹೊಂದಾಣಿಕೆಗಳು ಮತ್ತು ಪೂರೈಕೆ ನಿರ್ವಹಣಾ ಕ್ರಮಗಳ ಮೂಲಕ ಅದನ್ನು ಭರಿಸುತ್ತಿದ್ದವು.

ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಗಳಲ್ಲಿ ಸುಮಾರು 90 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ, ಇದರಿಂದಾಗಿ ಜಾಗತಿಕ ಇಂಧನ ಬೆಲೆ ಆಘಾತಗಳಿಗೆ ದೇಶದ ಆರ್ಥಿಕತೆಯು ಹೆಚ್ಚು ಗುರಿಯಾಗುತ್ತಿದೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿರುವುದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.ದರ ಏರಿಕೆಗೆ ಕಾರಣವೇನು?

ನಷ್ಟದ ಸುಳಿಯಲ್ಲಿ ತೈಲೋತ್ಪನ್ನಗಳ ಮಾರಾಟ ಕಂಪನಿಗಳು:

ಭಾರತ ಪ್ರಸ್ತುತ ಸಾಕಷ್ಟು ಇಂಧನ ದಾಸ್ತಾನು ಹೊಂದಿದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಇತ್ತೀಚೆಗೆ ಹೇಳಿದ್ದರು. ದೇಶವು ಸುಮಾರು ಎರಡು ತಿಂಗಳವರೆಗೆ ಸಾಕಷ್ಟು ಇಂಧನ ದಾಸ್ತಾನುಗಳನ್ನು ಹೊಂದಿದೆ. ಆದರೆ ಕಚ್ಚಾ ತೈಲ ಬೆಲೆಗಳು ಹೆಚ್ಚುತ್ತಲೇ ಇದ್ದರೆ ಮತ್ತು ಇಂಧನ ಬೆಲೆಗಳನ್ನು ಪರಿಷ್ಕರಿಸದಿದ್ದರೆ, ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಒಂದೇ ತ್ರೈಮಾಸಿಕದೊಳಗೆ ಸುಮಾರು ₹1 ಲಕ್ಷ ಕೋಟಿ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದರು.

ಸಿಐಐ ವಾರ್ಷಿಕ ವ್ಯವಹಾರ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪುರಿ, ಇಂಧನ ಬೆಲೆಗಳನ್ನು ಪರಿಷ್ಕರಿಸದ ಕಾರಣ ಸಾರ್ವಜನಿಕ ವಲಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಹೆಚ್ಚಿನ ಆರ್ಥಿಕ ಒತ್ತಡಕ್ಕೆ ಒಳಗಾಗಿವೆ ಅಂತರರಾಷ್ಟ್ರೀಯ ಬೆಲೆಗಳು ಮತ್ತು ದೇಶೀಯ ಬೆಲೆಗಳ ನಡುವಿನ ಅಂತರವು ಗಣನೀಯವಾಗಿ ಹೆಚ್ಚಿದ್ದು, ಇದು ಭಾರಿ ಆರ್ಥಿಕ ಒತ್ತಡಕ್ಕೆ ಕಾರಣವಾಗಿದೆ ಎಂದು ಪುರಿ ವಿವರಿಸಿದರು .ಜಾಗತಿಕ ಇಂಧನ ಕ್ಷೇತ್ರದಲ್ಲಿನ ಪ್ರಮುಖ ಆಘಾತಗಳ ಹೊರತಾಗಿಯೂ ಕಳೆದ ನಾಲ್ಕು ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗಿಲ್ಲ ಎಂದೂ ಅವರು ಹೇಳಿದ್ದರು.

ದರ ಏರಿಕೆ ಸುಳಿವು ನೀಡಿದ್ದ ಆರ್‌ಬಿಐ ಗವರ್ನರ್

ಪಶ್ಚಿಮ ಏಷ್ಯಾ ಸಂಘರ್ಷ ದೀರ್ಘಕಾಲದವರೆಗೆ ಮುಂದುವರಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್, ಸಂಜಯ್ ಮಲ್ಹೋತ್ರಾ ಇತ್ತೀಚೆಗೆ ಹೇಳಿದ್ದರು.

ಮಂಗಳವಾರ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಇಲ್ಲಿಯವರೆಗೆ ಹಣಕಾಸಿನ ಶಿಸ್ತನ್ನು ಕಾಯ್ದುಕೊಂಡಿದೆ ಮತ್ತು ಅದರ ಹಣಕಾಸು ಬಲವರ್ಧನೆ ಪ್ರಯತ್ನಗಳನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹೋರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಜಾಗತಿಕ ತೈಲ ಮತ್ತು ಅನಿಲ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡಿದೆ. ಇದರ ಹೆಚ್ಚಿನ ಪರಿಣಾಮ ಭಾರತ ಮೇಲಾಗುತ್ತದೆ. ಏಕೆಂದರೆ ಭಾರತವು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಮತ್ತು ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಇಂಧನ ಬೆಲೆ ಪರಿಷ್ಕರಣೆ ಮೂಲಕ ಸರ್ಕಾರವು ಹೆಚ್ಚಿನ ವೆಚ್ಚದ ಹೊರೆಯನ್ನು ಗ್ರಾಹಕರಿಗೆ ಹೊರಿಸುವುದು ಅನಿವಾರ್ಯ ಎಂದಿದ್ದರು.

ಮಿತವ್ಯಯದ ಕ್ರಮ ಅನುಸರಿಸುವಂತೆ ಕರೆ ನೀಡಿದ್ದ ಪ್ರಧಾನಿ

ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಿತವ್ಯಯದ ವಿವಿಧ ಕ್ರಮಗಳನ್ನು ಅನುಸರಿಸುವಂತೆ ಇತ್ತೀಚೆಗೆ ಕರೆ ನೀಡಿದ್ದರು.

ಹೈದರಾಬಾದ್‌ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ ಕಡಿಮೆ ಮಾಡುವುದು, ನಗರಗಳಲ್ಲಿ ಮೆಟ್ರೊ ರೈಲು ಸೇವೆಯ ಬಳಕೆ, ಕಾರು ಪೂಲಿಂಗ್, ಎಲೆಕ್ಟ್ರಿಕ್ ವಾಹನಗಳ ಬಳಕೆ, ಚಿನ್ನದ ಖರೀದಿ ಮುಂದೂಡುವುದು, ವಿದೇಶಿ ಪ್ರವಾಸ ತಪ್ಪಿಸುವಂತೆ ಹಾಗೂ ಮನೆಯಿಂದಲೇ ಕೆಲಸ ಮಾಡುವಂತೆ ಸಲಹೆ ನೀಡಿದ್ದರು.

ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿದಾಗ, ಮೋದಿ ಸರ್ಕಾರವು ಶತಕೋಟಿ ಲಾಭವನ್ನು ಜೇಬಿಗಿಳಿಸಿತು. 3 ತಿಂಗಳ ನಂತರ ಬಿಕ್ಕಟಿನ ನೆಪದಲ್ಲಿ ಅದರ ಹೊರೆಯನ್ನು ಸಾರ್ವಜನಿಕರ ಮೇಲೆ ಹೇರಲಾಗುತ್ತಿದೆ. ಸರ್ಕಾರದ ಈ ಬಿಕ್ಕಟ್ಟು ನಿರ್ವಹಣೆ ತಂತ್ರ ಸಾಮಾನ್ಯ ಜನರನ್ನು ಆರ್ಥಿಕ ಆಘಾತಗಳಿಂದ ರಕ್ಷಿಸಲು ಅಲ್ಲ . ಬದಲಿಗೆ ಅದಾನಿಯನ್ನು ಕಾನೂನು ಕ್ರಮದಿಂದ ರಕ್ಷಿಸಲು ಮಾತ್ರ.

ದಿಲೀಪ್ ಘೋಷ್, ಪಶ್ಚಿಮ ಬಂಗಾಳ ಸಚಿವಜಾಗತಿಕ ಸಂಘರ್ಷಗಳು ಇಂಧನ ದರಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಕಳೆದ 3 ವರ್ಷಗಳಿಂದ, ಜಗತ್ತಿನಲ್ಲಿ ಯುದ್ಧಗಳು ನಡೆಯುತ್ತಿದೆ. ಇದರಿಂದಾಗಿ, ಇತರ ದೇಶಗಳಲ್ಲಿ ವಿವಿಧ ರೀತಿಯ ಬಿಕ್ಕಟ್ಟುಗಳು ಉದ್ಭವಿಸಿವೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾಗರಿಕರನ್ನು ಆರ್ಥಿಕ ಆಘಾತಗಳಿಂದ ರಕ್ಷಿಸಿದೆ ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಪ್ರಧಾನಿಯವರ ಆತ್ಮೀಯ ಮಿತ್ರರಾದ ಅಮೆರಿಕ ಮತ್ತು ಇಸ್ರೇಲ್ ಪಶ್ಚಿಮ ಏಷ್ಯಾದಲ್ಲಿ ನಡೆಸಿದ ಯುದ್ಧದಿಂದಾಗಿ ಅಂತರರಾಷ್ಟ್ರೀಯ ತೈಲ ಬೆಲೆಗಳು ಈಗ ಏರುತ್ತಿವೆ. ಸದ್ಯ ವಿಧಾನಸಭಾ ಚುನಾವಣೆಗಳು ಮುಗಿದಿರುವುದರಿಂದ ಮೋದಿ ಸರ್ಕಾರವು ವಾಣಿಜ್ಯ ಎಲ್‌ಪಿಜಿ , ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ.

ಆಧಾರ: ಪಿಟಿಐ, ಟೈಮ್ಸ್‌ ಆಫ್‌ ಇಂಡಿಯಾ, ದಿ ಹಿಂದೂ, ಮನಿ ಕಂಟ್ರೋಲ್‌

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries