ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಗಡಿ ಭಾಗದ ಗಂಭೀರ್ ಮುಘ್ಲಾನ್ ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿರುವ ಮೂವರು ಪಾಕಿಸ್ತಾನಿ ಉಗ್ರರಿಗಾಗಿ ಭದ್ರತಾ ಪಡೆಗಳು ಕಳೆದ 56 ಗಂಟೆಗಳಿಂದ ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಭದ್ರತಾ ಪಡೆಗಳು ಸದ್ಯ ಉಗ್ರರನ್ನು ದಟ್ಟ ಅರಣ್ಯದಲ್ಲಿ ಸುತ್ತುವರೆದಿದ್ದು, ಕಾರ್ಯಾಚರಣೆಗೆ 'ಆಪರೇಷನ್ ಶೇರಾವಾಲಿ ' ಎಂದು ಹೆಸರಿಡಲಾಗಿದೆ.
ಭಾರತೀಯ ಸೇನೆಯ 'ರೋಮಿಯೋ ಫೋರ್ಸ್', ಸಿಆರ್ಪಿಎಫ್ (ಅಖPಈ), ವಿಶೇಷ ಕಾರ್ಯಾಚರಣೆ ತಂಡ (Sಔಉ) ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಧಾರವಾಡದಲ್ಲಿ ಮತ್ತೆ ಗುಂಡಿನ ಸದ್ದು: ಸೈಟ್ ಡೆವಲಪರ್ನ ಗನ್ಮ್ಯಾನ್ನಿಂದ ಆಟಾಟೋಪ!ಮೇಕೆದಾಟು ಯೋಜನೆ: ಕರ್ನಾಟಕದ ಡಿಪಿಆರ್ ತಿರಸ್ಕರಿಸಿ; ಮೋದಿಗೆ ಸಿಎಂ ವಿಜಯ್ ಪತ್ರ
ದಟ್ಟ ಕಾಡಿನ ಮೇಲೆ ಕಣ್ಣಿಡಲು ಸುಧಾರಿತ ಡ್ರೋನ್ಗಳು, ಹೈಟೆಕ್ ಕಣ್ಗಾವಲು ಉಪಕರಣಗಳು ಹಾಗೂ ಹೆಲಿಕಾಪ್ಟರ್ಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಉಗ್ರರು ರಾತ್ರಿಯ ವೇಳೆ ಪರಾರಿಯಾಗುವುದನ್ನು ತಡೆಯಲು ರಾತ್ರಿಯಿಡೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿವೆ.
ಮೇ 24 ರಂದು ಬೆಳಗ್ಗೆ ಸುಮಾರು 11:30 ರ ಸುಮಾರಿಗೆ ದೊರಿಮಾಲ್-ಗಂಭೀರ್ ಮುಘ್ಲಾನ್ ವಲಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಜಂಟಿ ಶೋಧ ಕಾರ್ಯ ಆರಂಭಿಸಿದಾಗ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಸೇನೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಿ, ಅವರು ತಪ್ಪಿಸಿಕೊಳ್ಳದಂತೆ ಸುತ್ತುವರಿಯಿತು.
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಅನೆ ಲಕ್ಷ್ಮಿ ಕೋಲಾರಕ್ಕೆ: ಸ್ಥಳೀಯರ ಪ್ರತಿಭಟನೆ!2028ರ ಚುನಾವಣೆಯಲ್ಲೂ ಗಂಗಾವತಿಯಿಂದ ಸ್ಪರ್ಧೆ ಮಾಡ್ತೇನೆ: ಜನಾರ್ದನ ರೆಡ್ಡಿ
ದಟ್ಟ ಅರಣ್ಯದಲ್ಲಿ ಉಗ್ರರು ಅಡಗಿದ್ದಾರೆ. ಭದ್ರತಾ ಪಡೆಗಳು ಅತ್ಯಂತ ಎಚ್ಚರಿಕೆಯಿಂದ ಕಾಡಿನೊಳಗೆ ಮುನ್ನಡೆಯುತ್ತಿವೆ. ಈ ಹಿಂದೆ ಇದೇ ಉಗ್ರರ ತಂಡ ಭದ್ರತಾ ಪಡೆಗಳ ಕಣ್ಣು ತಪ್ಪಿಸಿ ಪರಾರಿಯಾಗಿತ್ತು. ಆದರೆ ಈ ಬಾರಿ ಸುಧಾರಿತ ಕಣ್ಗಾವಲು ವ್ಯವಸ್ಥೆ ಇರುವುದರಿಂದ ಅವರು ತಪ್ಪಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಉನ್ನತ ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

