HEALTH TIPS

ಭಾರತವನ್ನೇ ಹಿಂದಿಕ್ಕಿದ ತೈವಾನ್ ಜಗತ್ತಿನ 5ನೇ ಅತಿದೊಡ್ಡ ಷೇರು ಮಾರುಕಟ್ಟೆ

ನವದೆಹಲಿ: ಭಾರತವನ್ನೇ ಹಿಂದಿಕ್ಕಿದ ತೈವಾನ್, ಜಗತ್ತಿನ ಐದನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಈ ಕುರಿತು 'ಬ್ಲೂಮ್‌ಬರ್ಗ್' ವರದಿ ಮಾಡಿದೆ.

ಬ್ಲೂಮ್‌ಬರ್ಗ್ ಪ್ರಕಾರ, ತೈವಾನ್‌ನ ಷೇರು ಮಾರುಕಟ್ಟೆಯ ಮೌಲ್ಯವು $4.95 ಟ್ರಿಲಿಯನ್‌ಗೆ ತಲುಪಿದೆ. ಮತ್ತೊಂದೆಡೆ ಭಾರತದ ಷೇರು ಮೌಲ್ಯ $4.92 ಟ್ರಿಲಿಯನ್ ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ತೈವಾನ್ ದೇಶವು ಭಾರತವನ್ನು ಹಿಂದಿಕ್ಕಿರುವುದು ಗಮನಾರ್ಹವೆನಿಸಿದೆ.

ಜಾಗತಿಕ ಷೇರು ಮಾರುಕಟ್ಟೆ ಶ್ರೇಯಾಂಕದಲ್ಲಿ ತೈವಾನ್ ಈಗ, ಅಮೆರಿಕ, ಚೀನಾ, ಜಪಾನ್ ಮತ್ತು ಹಾಂಕಾಂಗ್ ನಂತರದ ಸ್ಥಾನದಲ್ಲಿದೆ.

140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ, ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದುತ್ತಿರುವ ಭಾರತದಲ್ಲಿ ಅತಿ ಹೆಚ್ಚು ಲಿಸ್ಟಡ್ ಕಂಪನಿಗಳ ಹೊರತಾಗಿಯೂ ಈ ಬೆಳವಣಿಗೆಯು ಅಚ್ಚರಿ ಮೂಡಿಸಿದೆ.

ಎ.ಐ, ಸೆಮಿಕಂಡಕ್ಟರ್‌ಗೆ ಉತ್ತೇಜನ ನೀಡಿರುವುದು ತೈವಾನ್‌ನ ವೃದ್ಧಿಗೆ ಕಾರಣವಾಗಿದೆ. ಜಗತ್ತಿನ ಅತಿ ದೊಡ್ಡ ಸೆಮಿಕಂಡಕ್ಟರ್ ತಯಾರಕ ಸಂಸ್ಥೆ ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ (ಟಿಎಸ್‌ಎಂಸಿ) ಬಹುಪಾಲು ಷೇರನ್ನು ಹೊಂದಿದೆ. ಅದು ತೈವಾನ್‌ನ ಬೆಂಚ್ ಮಾರ್ಕ್ ಷೇರು ಸೂಚ್ಯಂಕದಲ್ಲಿ ಶೇ 42ರಷ್ಟು ಪಾಲನ್ನು ಹೊಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries