ಅರ್ಹತಾ ಮಾನದಂಡಗಳನ್ನು ಪೂರೈಸುವ ಮಹಿಳೆಯರು ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ ಎಂದು ಸರಕಾರ ಸ್ಪಷ್ಟಪಡಿಸಿದೆ. ಈ 69 ಲಕ್ಷ ಮಹಿಳೆಯರು ಇ-ಕೆವೈಸಿ ಮತ್ತು ಸರಕಾರದ ಇತರ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲರಾಗಿರುವುದರಿಂದ ಅವರಿಗೆ ಇನ್ನು ಮುಂದೆ ಯೋಜನೆಯ ಲಾಭ ಸಿಗುವುದಿಲ್ಲ.
ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಕೆ:
ಕುತೂಹಲಕಾರಿ ವಿಷಯವೆಂದರೆ, 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಅಂದಿನ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಈ ಯೋಜನೆಯನ್ನು ಪ್ರಾರಂಭಿಸಿದಾಗ ಸುಮಾರು 2.46 ಕೋಟಿ ಮಹಿಳೆಯರು ಫಲಾನುಭವಿಗಳಾಗಿ ನೋಂದಾಯಿಸಿಕೊಂಡಿದ್ದರು. ಆದರೆ, ಇತ್ತೀಚಿನ ಪರಿಶೀಲನೆಯ ನಂತರ ಅರ್ಹ ಫಲಾನುಭವಿಗಳ ಸಂಖ್ಯೆ ಸುಮಾರು 1.77 ಕೋಟಿಗೆ ಇಳಿಕೆಯಾಗಿದೆ.
ಈ ಯೋಜನೆಯಡಿ ಬಡ ಮತ್ತು ಅಗತ್ಯವಿರುವ ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂ. ಆರ್ಥಿಕ ನೆರವು ನೀಡಲಾಗುತ್ತದೆ.
ಯೋಜನೆಯ ವಾರ್ಷಿಕ ವೆಚ್ಚವು ಆರಂಭದಲ್ಲಿ 45,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ನಂತರ ಅದು 36,000 ಕೋಟಿ ರೂ.ಗೆ ಇಳಿಕೆಯಾಯಿತು ಮತ್ತು ಈಗ ಫಲಾನುಭವಿಗಳ ಸಂಖ್ಯೆ ಕಡಿಮೆಯಾದ ಕಾರಣ ಅದು 26,000 ಕೋಟಿ ರೂ. ಗೆ ಇಳಿದಿದೆ.

