HEALTH TIPS

ಎನ್‌ಎಫ್‌ಎಚ್‌ಎಸ್ 6: ಸಾಂಸ್ಥಿಕ ಹೆರಿಗೆಗಳ ಪ್ರಮಾಣದಲ್ಲಿ ಏರಿಕೆ

ನವದೆಹಲಿ: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಂಸ್ಥಿಕ ಹೆರಿಗೆಗಳ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಶುಕ್ರವಾರ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6(ಎನ್‌ಎಫ್‌ಎಚ್‌ಎಸ್‌) ಪ್ರಕಾರ ದೇಶದಲ್ಲಿ 2019-2022ರಲ್ಲಿ ಶೇ 88.6ರಷ್ಟಿದ್ದ ಪ್ರಮಾಣ, 2023-24ರಲ್ಲಿ ಶೇ 9.6ಕ್ಕೆ ಏರಿಕೆಯಾಗಿದೆ.

ವರದಿಯು ದೇಶ ಸಾರ್ವತ್ರಿಕ ವ್ಯಾಪ್ತಿಯತ್ತ ಸಮೀಪಿಸುತ್ತಿರುವುದನ್ನು ಖಚಿತಪಡಿಸುತ್ತದೆ.

ಎನ್‌ಎಫ್‌ಎಚ್‌ಎಸ್‌-6 ದತ್ತಾಂಶದ ಪ್ರಕಾರ 2023-24ರಲ್ಲಿ ಶೇ 95.9ರಷ್ಟು ಗರ್ಭಿಣಿಯರು ಪ್ರಸವಪೂರ್ವ ಆರೈಕೆ (ಎಎನ್‌ಸಿ) ಪಡೆದಿದ್ದಾರೆ. ಆದರೆ, ಮೊದಲ ತ್ರೈಮಾಸಿಕದಲ್ಲಿ ಎಎನ್‌ಸಿ ಪಡೆದಿರುವ ತಾಯಂದಿರ ಪ್ರಮಾಣ ಶೇ 70ರಿಂದ ಶೇ 76.2ಕ್ಕೆ ಏರಿಕೆಯಾಗಿದೆ.

ತಾಯಂದಿರುವ ಪಡೆಯುವ ನಾಲ್ಕು ಎಎನ್‌ಸಿ ಭೇಟಿಗಳಲ್ಲಿ, ಶೇ 58.5ರಿಂದ ಶೇ 65.2ರಷ್ಟು ಏರಿಕೆಯಾಗಿದೆ. ಇದು ತಾಯಿಯ ಆರೈಕೆ ಸೇವೆಗಳು ನಿರಂತರವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ನೋಡಲ್ ಏಜೆನ್ಸಿಯಾಗಿರುವ ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ(ಐಐಪಿಎಸ್‌)ಜತೆ ಸೇರಿ2023-24ರ ಅವಧಿಯಲ್ಲಿ ಎನ್‌ಎಫ್‌ಎಚ್‌ಎಸ್‌-6 ನಡೆಸಿದೆ.

ಈ ಅವಧಿಯಲ್ಲಿ ದೇಶದ 715 ಜಿಲ್ಲೆಗಳಲ್ಲಿ 6.79 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಿದೆ. ಸಮೀಕ್ಷೆಯು ಜನಸಂಖ್ಯೆ, ಆರೋಗ್ಯ, ಪೋಷಣೆ ಮತ್ತು ಕುಟುಂಬ ಕಲ್ಯಾಣ ಸೂಚಕಗಳ ಕುರಿತ ಪ್ರಮುಖ ಪುರಾವೆಗಳನ್ನು ಒದಗಿಸುತ್ತದೆ. ಹಾಗೆಯೇ, ಜಿಲ್ಲಾ ಮಟ್ಟದವರೆಗೆ ಪುರಾವೆ ಆಧಾರಿತ ಯೋಜನೆ ಮತ್ತು ಕಾರ್ಯಕ್ರಮದ ಅನುಷ್ಠಾನವನ್ನೂ ಬೆಂಬಲಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries