HEALTH TIPS

ಆಭರಣ ಪ್ರಿಯರಿಗೆ ಕೇಂದ್ರದ ಬಿಗ್ ಶಾಕ್!; ಚಿನ್ನದ ಬೇಡಿಕೆಯಲ್ಲಿ ಶೇ. 70 ರಷ್ಟು ಭೀಕರ ಕುಸಿತ!: ಬಂಗಾರದ ಮೇಲೆ ಶೇ. 18.45 ರಷ್ಟು ತೆರಿಗೆ ಹೇರಿದ ಕೇಂದ್ರ ಸರ್ಕಾರ!

ನವದೆಹಲಿ: ದೇಶದ ಹಬ್ಬ ಹರಿದಿನಗಳು ಹಾಗೂ ಮದುವೆ ಸೀಸನ್‌ನ ಆಧಾರಸ್ತಂಭವಾಗಿರುವ ಚಿನ್ನದ ಮಾರುಕಟ್ಟೆಗೆ ಕೇಂದ್ರ ಸರ್ಕಾರದ ಒಂದು ಕಠಿಣ ಆರ್ಥಿಕ ನೀತಿ ಆಘಾತ ನೀಡಿದೆ. ಚಾಲ್ತಿಯಲ್ಲಿರುವ ಮೇ ತಿಂಗಳ ಆರಂಭದಲ್ಲಿ ಸರ್ಕಾರವು ಬಂಗಾರದ(Gold demand drop) ಮೇಲಿನ ಆಮದು ಸುಂಕವನ್ನು ದುಪ್ಪಟ್ಟುಗೊಳಿಸಿದ ಬೆನ್ನಲ್ಲೇ, ದೇಶಾದ್ಯಂತ ಚಿನ್ನದ ಬೇಡಿಕೆಯು ಬರೋಬ್ಬರಿ ಶೇ.70 ರಷ್ಟು ಕುಸಿದಿದೆ.

ಇದರ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಜಾರಿಯಲ್ಲಿರುವ ಭೀಕರ ಇರಾನ್ ಸಂಘರ್ಷದ ಕಾರಣದಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಇದು ಮಧ್ಯಮ ವರ್ಗದ ಗ್ರಾಹಕರ ಖರೀದಿ ಸಾಮರ್ಥ್ಯ ಕಮರಲು ಕಾರಣವಾಗಿದೆ.

ಚಿನ್ನದ ಉದ್ಯಮದ ಇತ್ತೀಚಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಮೇ 27 ಕ್ಕೆ ಕೊನೆಗೊಂಡ ಕೇವಲ ಎರಡು ವಾರಗಳ ಅವಧಿಯಲ್ಲಿ ಭಾರತದ ಒಟ್ಟು ಚಿನ್ನದ ಬೇಡಿಕೆ ಕೇವಲ 7.5 ಟನ್‌ಗಳಿಗೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 25 ಟನ್ ಚಿನ್ನದ ಭರ್ಜರಿ ಮಾರಾಟವಾಗಿತ್ತು.

ಶೇ. 6 ರಿಂದ ಶೇ. 15 ಕ್ಕೆ ಏರಿದ ಸುಂಕ; ಜೂನ್ ಮದುವೆ ಸೀಸನ್‌ಗೆ ಬಿಗ್ ಶಾಕ್​!

ಆರ್ಥಿಕ ವರದಿಗಳ ಅನ್ವಯ, ದೇಶದ ವಿದೇಶಿ ವಿನಿಮಯ ನಿಧಿಯನ್ನು ರಕ್ಷಿಸಲು ಮತ್ತು ಅನಗತ್ಯ ಆಮದಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರವು ಕಳೆದ ಮೇ, 13 ರಿಂದ ಜಾರಿಗೆ ಬರುವಂತೆ ಚಿನ್ನದ ಆಮದು ಸುಂಕವನ್ನು ಶೇ. 6 ರಿಂದ ನೇರವಾಗಿ ಶೇ. 15 ಕ್ಕೆ ಹೆಚ್ಚಿಸಿತ್ತು. ಈ ಸುಂಕ ಏರಿಕೆಯಾದ ಕೇವಲ 15 ದಿನಗಳಲ್ಲಿ ಇಡೀ ಚಿನ್ನದ ಮಾರುಕಟ್ಟೆ ಸೈಲೆಂಟ್ ಆಗಿದೆ. ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ದೇಶದ ಪ್ರತಿಯೊಂದು ಪ್ರಮುಖ ನಗರದ ಚಿನ್ನದ ವ್ಯಾಪಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದು, ಶೇ. 70 ರಷ್ಟು ಗ್ರಾಹಕರು ಚಿನ್ನದ ಅಂಗಡಿಗಳ ಕಡೆಗೆ ಮುಖ ಮಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದೆ.

ಸುರೇಂದ್ರ ಮೆಹ್ತಾ, ಭಾರತದ ಒಟ್ಟು ಚಿನ್ನದ ಮಾರುಕಟ್ಟೆಯಲ್ಲಿ ಶೇ. 65 ಕ್ಕೂ ಹೆಚ್ಚು ಪಾಲು ಹೊಂದಿರುವ ಅಸಂಘಟಿತ ವಲಯದ ಸಣ್ಣ ಸಣ್ಣ ಚಿನ್ನದ ವರ್ತಕರು ಮತ್ತು ಗ್ರಾಮೀಣಭಾಗದ ಆಭರಣ ತಯಾರಕರು ಈ ಸುಂಕ ಏರಿಕೆಯಿಂದ ಅತ್ಯಂತ ಭೀಕರವಾಗಿ ನಲುಗಿಹೋಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಂಗಾರದ ಮೇಲೆ ಬರೋಬ್ಬರಿ ಶೇ. 18.45 ರಷ್ಟು ಭಾರಿ ತೆರಿಗೆ ಅಸ್ತ್ರ!

ಕೇಂದ್ರ ಸರ್ಕಾರದ ಈ ಹೊಸ ಸುಂಕ ಪರಿಷ್ಕರಣೆಯ ನಂತರ ಭಾರತದಲ್ಲಿ ಚಿನ್ನ ಖರೀದಿ ಮಾಡುವುದು ಸಾಮಾನ್ಯ ಜನರಿಗೆ ಅಸಾಧ್ಯವೆಂಬಂತಾಗಿದೆ. ಏಕೆಂದರೆ ಆಮದು ಸುಂಕದ ಜೊತೆಗೆ ಸರಕು ಮತ್ತು ಸೇವಾ ತೆರಿಗೆಯನ್ನು (GST) ಸೇರಿಸಿದರೆ, ಚಿನ್ನದ ಮೇಲಿನ ಒಟ್ಟು ಪರಿಣಾಮಕಾರಿ ತೆರಿಗೆ ಹೊರೆ ಈ ಹಿಂದೆ ಇದ್ದ ಶೇ. 9.18 ರಿಂದ ನೇರವಾಗಿ ಶೇ. 18.45 ಕ್ಕೆ ಏರಿಕೆಯಾಗಿದೆ. ಅಂದರೆ ಗ್ರಾಹಕರು ಖರೀದಿಸುವ ಪ್ರತಿ 1 ಲಕ್ಷ ರೂಪಾಯಿ ಮೌಲ್ಯದ ಚಿನ್ನಕ್ಕೆ ಕೇವಲ ತೆರಿಗೆ ರೂಪದಲ್ಲೇ ಸುಮಾರು 18,500 ರೂಪಾಯಿಗಳನ್ನು ಸರ್ಕಾರದ ಖಜಾನೆಗೆ ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಜಾಗತಿಕವಾಗಿ ಇರಾನ್ ಸೃಷ್ಟಿಸಿರುವ ಯುದ್ಧದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಏರುತ್ತಿರುವ ಬೆನ್ನಲ್ಲೇ, ದೇಶೀಯವಾಗಿ ಚಿನ್ನದ ಮೇಲಿನ ಈ ಮೆಗಾ ತೆರಿಗೆ ಅಸ್ತ್ರವು ಬಂಗಾರದ ಗಿರಾಕಿಗಳನ್ನು ಸಂಪೂರ್ಣವಾಗಿ ಮಾರುಕಟ್ಟೆಯಿಂದ ದೂರ ಸರಿಸುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಮದುವೆ ಆಚರಣೆಗಳಿಗಾಗಿ ಚಿನ್ನ ಕೊಳ್ಳಲು ಯೋಜಿಸಿದ್ದ ಕುಟುಂಬಗಳು ಈಗ ಬೆಲೆ ಏರಿಕೆಯ ಬಿಸಿಗೆ ಬೆಚ್ಚಿಬಿದ್ದಿದ್ದು, ಮಾರುಕಟ್ಟೆ ಚೇತರಿಸಿಕೊಳ್ಳಲು ಇನ್ನು ಕೆಲವು ತಿಂಗಳುಗಳು ಬೇಕಾಗಬಹುದು ಎಂದು ಆಭರಣ ಉದ್ಯಮಿಗಳು ಅಂದಾಜಿಸಿದ್ದಾರೆ,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries