ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹೊರ್ಮುಜ್ ಜಲಸಂಧಿ ಬಳಿ ಇರಾನ್‌ನ 6 ಚಿಕ್ಕ ಹಡಗುಗಳನ್ನು ನಾಶ ಮಾಡಿರುವುದಾಗಿ ಅಮೆರಿಕ ಮಿಲಿಟರಿ ಹೇಳಿದೆ. ಅಲ್ಲದೇ, ಇರಾನ್‌ನ ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಫೆಬ್ರುವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಆರಂಭಿಸಿದ ನಂತರ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ಜಾಗತಿಕ ತೈಲ ಮತ್ತು ಸರಕು ಸಾಗಣೆಯ ನಿರ್ಣಾಯಕ ಜಲಮಾರ್ಗದ ನಿಯಂತ್ರಣವನ್ನು ಇರಾನ್‌ನಿಂದ ವಶಪಡಿಸಿಕೊಳ್ಳಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಾಜೆಕ್ಟ್ ಫ್ರೀಡಂ ಎಂಬ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸೋಮವಾರ ಯುಎಇ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಸೇರಿದಂತೆ ಈ ಪ್ರದೇಶದಲ್ಲಿ ಇರಾನ್ ದಾಳಿ ಮುಂದುವರಿಸಿದೆ. ಹೀಗಾಗಿ, ಎರಡೂ ಕಡೆಯಿಂದ ದಾಳಿ ನಡೆಯುತ್ತಿದ್ದು, ಏಪ್ರಿಲ್ 8ರಂದು ಆರಂಭವಾದ ಕದನ ವಿರಾಮ ಜಾರಿಯಲ್ಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ನಿರಾಕರಿಸಿದ್ದಾರೆ.
ಆದರೆ, ಟ್ರಂಪ್ ಅವರ ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಲು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಡೆಸುತ್ತಿರುವ ಪ್ರಯತ್ನಗಳನ್ನು ಕೂಪರ್ ಒಪ್ಪಿಕೊಂಡಿದ್ದಾರೆ.
'ನಮ್ಮ ರಕ್ಷಣೆಯಲ್ಲಿರುವ ಹಡಗುಗಳ ಮೇಲೆ ಐಆರ್‌ಜಿಸಿಯು ಬಹು ಕ್ರೂಸ್ ಕ್ಷಿಪಣಿ, ಡ್ರೋನ್ ಮತ್ತು ಸಣ್ಣ ದೋಣಿಗಳ ಮೂಲಕ ದಾಳಿ ನಡೆಸಿದೆ. ರಕ್ಷಣಾತ್ಮಕ ಯುದ್ಧಸಾಮಗ್ರಿಗಳ ಮೂಲಕ ನಾವು ಆ ಪ್ರತಿಯೊಂದು ಬೆದರಿಕೆಗಳನ್ನು ಎದುರಿಸಿದ್ದೇವೆ'ಎಂದು ಅವರು ಹೇಳಿದ್ದಾರೆ.
ಪ್ರಾಜೆಕ್ಟ್ ಫ್ರೀಡಂ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ, ಇರಾನ್ ಪಡೆಗಳು ಅಮೆರಿಕದ ಮಿಲಿಟರಿ ಸ್ವತ್ತುಗಳಿಂದ ದೂರವಿರಲು ಬಲವಾದ ಸಲಹೆ ನೀಡಿದ್ದೇನೆ ಎಂದಿರುವ ಕೂಪರ್, ನಮ್ಮ ಕಾರ್ಯಾಚರಣೆಯಲ್ಲಿ 15,000 ಸೈನಿಕರು, ನೌಕಾಪಡೆಯ ವಿಧ್ವಂಸಕ ಹಡಗುಗಳು, 100ಕ್ಕೂ ಹೆಚ್ಚು ಭೂ ಮತ್ತು ಸಮುದ್ರದ ಮೂಲಕ ದಾಳಿ ನಡೆಸುವ ಯುದ್ಧೋಪಕರಗಳೂ ಿವೆ ಎಂದಿದ್ದಾರೆ.
'ಕಾರ್ಯಾಚರಣೆಯಲ್ಲಿ ತೊಡಗಿರುವ ಅಮೆರಿಕದ ಕಮಾಂಡರ್‌ಗಳು ತಮ್ಮ ಮಿಲಿಟರಿ ಸೌಲಭ್ಯಗಳ ರಕ್ಷಣೆ ಮತ್ತು ವಾಣಿಜ್ಯ ಹಡಗುಗಳ ಸಾಗಣೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಅಧಿಕಾರಿಗಳನ್ನು ಹೊಂದಿದ್ದಾರೆ' ಎಂದು ಅವರು ಹೇಳಿದ್ದಾರೆ.
ಆದರೆ, ಕಳೆದ ಕೆಲವು ಗಂಟೆಗಳಲ್ಲಿ ಯಾವುದೇ ವಾಣಿಜ್ಯ ಹಡಗುಗಳು ಜಲಸಂಧಿಯನ್ನು ದಾಟಿಲ್ಲ. ಅಮೆರಿಕದ ಕಾರ್ಯಾಚರಣೆಯ ಕುರಿತಾದ ಹೇಳಿಕೆಗಳು ಸುಳ್ಳು ಎಂದು ಇರಾನ್‌ನ ೈಆರ್‌ಜಿಸಿ ತಿಳಿಸಿದೆ. ಅಮೆರಿಕ, ಇರಾನ್ ಹಡಗುಗಳನ್ನು ನಾಶ ಮಾಡಿದೆ ಎಂಬ ವರದಿಗಳನ್ನು ಇರಾನ್ ಮಾಧ್ಯಮಗಳು ಸಹ ನಿರಾಕರಿಸಿವೆ.

