HEALTH TIPS

ಗಾಝಾದ ಶೇ.70ರಷ್ಟು ಭೂಪ್ರದೇಶ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇಸ್ರೇಲ್ ಸೇನೆಗೆ ನೆತನ್ಯಾಹು ಆದೇಶ

ಟೆಲ್‌ಅವೀವ್: ಗಾಝಾದ ಶೇ.70ರಷ್ಟು ಭೂಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ಇಸ್ರೇಲಿ ಸೇನೆಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಆದೇಶಿಸಿದ್ದಾರೆ. ನೆತನ್ಯಾಹು ಅವರ ಈ ಆದೇಶವು ಗಾಝಾ ಪ್ರದೇಶದಲ್ಲಿ ಗಂಭೀರವಾದ ಸೇನಾ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯಿದೆ.

ಕಳೆದ ಅಕ್ಟೋಬರ್‌ನಿಂದ ತಾತ್ಕಾಲಿಕ ಕದನವಿರಾಮ ಜಾರಿಯಲ್ಲಿರುವ ಹೊರತಾಗಿಯೂ ನೆತನ್ಯಾಹು ಅವರು ಈ ಆದೇಶ ಹೊರಡಿಸಿರುವುದು ಪ್ರದೇಶದಲ್ಲಿ ಮತ್ತೆ ಸಂಘರ್ಷದ ಕಿಡಿಯನ್ನು ಹೊತ್ತಿಸುವ ಭೀತಿಯನ್ನು ಮೂಡಿಸಿದೆ.

ಪಶ್ಚಿಮ ದಂಡೆಯಲ್ಲಿರುವ ಇಸ್ರೇಲಿ ವಸಾಹತೊಂದರಲ್ಲಿ ಆಯೋಜಿಸಲಾದ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಹಮಾಸ್ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಗಾಝಾದ ಮೇಲೆ ಇಸ್ರೇಲ್‌ನ ನಿಯಂತ್ರಣವನ್ನು ಹಂತಹಂತವಾಗಿ ಹೆಚ್ಚಿಸುತ್ತಾ ಬರಲಾಗಿದೆಯೆಂದು ತಿಳಿಸಿದರು.

''ನಾವು ಹಮಾಸ್ ಅನ್ನು ಸದೆಬಡಿಯುತ್ತಿದ್ದೇವೆ. ಗಾಝಾದ ಶೇ.60ರಷ್ಟು ಭೂಪ್ರದೇಶ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ. ಈಗ ಅದನ್ನು ಶೇ.70ಕ್ಕೆ ಏರಿಸುವಂತೆ ನಾನು ಸೇನೆಗೆ ಸೂಚನೆ ನೀಡಿದ್ದೇನೆ'' ಎಂದು ನೆತನ್ಯಾಹು ಹೇಳಿದರು.

ನೆತನ್ಯಾಹು ಅವರ ಭಾಷಣದ ವಿಡಿಯೊವನ್ನು ಇಸ್ರೇಲ್‌ನ ಚಾನೆಲ್ 12 ಪ್ರಸಾರ ಮಾಡಿದೆ.

ನೆತನ್ಯಾಹು ಅವರು ಈ ಹಿಂದೆಯೂ ಗಾಝಾದ ಶೇ.60ರಷ್ಟು ಭೂಪ್ರದೇಶ ಇಸ್ರೇಲ್ ಸೇನೆಯ ನಿಯಂತ್ರಣದಲ್ಲಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಗಾಝಾ ನೆಪದಲ್ಲಿ ನಾಗರಿಕರ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದ್ದು, ಸಾವಿರಾರು ಮಂದಿಯ ಸಾವುನೋವಿಗೆ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries