HEALTH TIPS

ಬ್ರಿಟನ್ ಉದ್ಯೋಗಗಳನ್ನು ಭಾರತೀಯರು, ಪಾಕಿಸ್ತಾನಿಯರು ಕಸಿದುಕೊಳ್ಳುತ್ತಿದ್ದಾರೆ: ಬಲಪಂಥೀಯ ಪಕ್ಷ ರಿಸ್ಟೋರ್ ಬ್ರಿಟನ್ ಆರೋಪ

ಲಂಡನ್: ಬ್ರಿಟನ್‌ಗೆ ವಲಸೆ ಬರುತ್ತಿರುವ ಲಕ್ಷಾಂತರ ಭಾರತೀಯರು ಹಾಗೂ ಪಾಕಿಸ್ತಾನಿಯರು, ಬ್ರಿಟನ್ ಪ್ರಜೆಗಳಿಗೆ ದೊರೆಯಬೇಕಾದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಇತ್ತೀಚೆಗೆ ಸ್ಥಾಪನೆಯಾದ ಬಲಪಂಥೀಯ ರಾಜಕೀಯ ಪಕ್ಷ 'ರಿಸ್ಟೋರ್ ಬ್ರಿಟನ್'ನ ವರಿಷ್ಠ ರೂಪರ್ಟ್ ಲೋವೆ ಆರೋಪಿಸಿದ್ದಾರೆ.

ಈ ಹೇಳಿಕೆಗಾಗಿ ತನ್ನನ್ನು ಜನಾಂಗವಾದಿಯೆಂದು ಬಿಂಬಿಸಿದರೂ ಅದಕ್ಕೆ ತಾನು ಚಿಂತಿಸುವುದಿಲ್ಲ ಎಂದಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ''ಲಕ್ಷಾಂತರ ಮಂದಿ ಪಾಕಿಸ್ತಾನಿಯರು ಹಾಗೂ ಭಾರತೀಯರನ್ನು ಆಮದು ಮಾಡಿಕೊಂಡು, ಅವರಿಂದ ನಿರುದ್ಯೋಗಿ ಬ್ರಿಟನ್ನಿಗರಿಗೆ ದೊರೆಯಬೇಕಾದ ಉದ್ಯೋಗಗಳನ್ನು ಮಾಡಿಸುವುದನ್ನು ನಾನು ಒಪ್ಪುವುದಿಲ್ಲ'' ಎಂದು ಬರೆದಿದ್ದಾರೆ.

ಇದಕ್ಕೂ ಮುನ್ನ ತಮ್ಮ ಹಿಂದಿನ ಪೋಸ್ಟ್‌ನಲ್ಲಿ, ವಾಯವ್ಯ ಇಂಗ್ಲೆಂಡ್‌ನ ಕೆಲವು ಭಾಗಗಳಿಗೆ ಭೇಟಿ ನೀಡಿದಾಗ ತಮಗೆ ಯಾವುದೇ ಹೊರದೇಶಕ್ಕೆ ಸಾಗಾಟ ಮಾಡಿದಂತಹ ಅನುಭವವಾಯಿತು ಎಂದು ಲೋವೆ ಹೇಳಿದ್ದರು.

''ಇದು ಅಕಸ್ಮಿಕವಾಗಿ ನಡೆದಿಲ್ಲ. ಲೇಬರ್, ರಿಫಾರ್ಮ್ ಹಾಗೂ ಕನ್ಸರ್ವೇಟಿವ್ ಪಕ್ಷಗಳ ರಾಜಕಾರಣಿಗಳು ತೃತೀಯ ಜಗತ್ತಿನ ರಾಷ್ಟ್ರಗಳಿಂದ ಲಕ್ಷಾಂತರ ಮಂದಿ ಕೆಳಮಟ್ಟದ ಕುಶಲ ಕಾರ್ಮಿಕರನ್ನು ಆಮದು ಮಾಡಿಕೊಂಡ ಇಚ್ಛಾಪೂರ್ವಕ ನಿರ್ಧಾರದ ಪರಿಣಾಮ ಇದಾಗಿದೆ. ಈ ಸಮಸ್ಯೆ ಉಲ್ಬಣಿಸುತ್ತಲೇ ಹೋಗುತ್ತದೆ. ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ'' ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries