ಬದಿಯಡ್ಕ: ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ನೇತೃತ್ವದಲ್ಲಿ ಕಸಾಪ ಕೇರಳ ಗಡಿನಾಡ ಘಟಕ, ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ಮತ್ತು ಕೀರಿಕ್ಕಾಡು ಸ್ಮಾರಕ ಸಾಂಸ್ಕøತಿಕ ಅಧ್ಯಯನ ಕೇಂದ್ರ ದೇಲಂಪಾಡಿ, ಕಲಾಕುಂಚ ಕಾಸರಗೋಡು, ಗಿಳಿವಿಂಡು ಮಂಜೇಶ್ವರ, ಸ್ನೇಹರಂಗ ಕಾಸರಗೋಡು ಸಹಿತ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಮೇ.31 ರಂದು ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಆವರಣದಲ್ಲಿ ಕವಿ, ವೈದ್ಯ, ಅರ್ಥಧಾರಿ ಡಾ.ರಮಾನಂದ ಬನಾರಿ 85ರ ಅಂಗವಾಗಿ ಕನ್ನಡ ಸಾಹಿತ್ಯ-ಸಂಸ್ಕøತಿ ಸಮ್ಮೇಳನ ಸಮಾರಂಭವನ್ನು ದಿನಪೂರ್ತಿ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಬೆಳಿಗ್ಗೆ 9ಕ್ಕೆ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಉದ್ಘಾಟಿಸುವರು. ಕರ್ನಾಟಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಕಾಸರಗೋಡಿನ ಕಣ್ಮಣಿ ಡಾ.ರಮಾನಂದ ಬನಾರಿ 85 ಸಾಕ್ಷ್ಯಚಿತ್ರ ಬಿಡುಗಡೆಗೊಳಿಸುವರು. ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ.ಮೋಹನ ಕುಂಟಾರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಅಭಿನಂದನಾ ಭಾಷಣ ಮಾಡುವರು. ಆಕಾಶವಾಣಿ ನಿಕಟಪೂರ್ವ ನಿರ್ದೇಶಕ ಡಾ.ವಸಂತಕುಮಾರ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡುವರು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉಪಸ್ಥಿತರಿರುವರು. ಈ ಸಂದರ್ಭ ಕುಟ್ಟಿಯಾನ ಮುಹಮ್ಮದ್ ಅವರ ಕನಸುಗಳ ಭೂಮಿಗೆ ಯಾತ್ರೆ ಕೃತಿ ಬಿಡುಗಡೆಗೊಳಿಸಲಾಗುವುದು. ಸಾಕ್ಷ್ಯಚಿತ್ರ ನಿರ್ಮಾಪಕ ಡಾ.ಪ್ರವೀಣ್ ರಾಜ್ ಎಸ್.ರಾವ್ ಅವರನ್ನು ಗೌರವಿಸಲಾಗುವುದು. ಮುಖ್ಯ ಅತಿಥಿಗಳಾಗಿ ಶಾಸಕ ಎಕೆಎಂ ಅಶ್ರಫ್, ಪ್ರಕಾಶ್ ಮತ್ತೀಹಳ್ಳಿ, ಜಯದೇವ ಖಂಡಿಗೆ, ಡಾ.ಜೆ.ಪಿ.ಎನ್.ತೊಟ್ಟೆತ್ತೋಡಿ, ವಿಜಯಲಕ್ಷ್ಮೀ ಶಾನುಭೋಗ್, ಎ.ಆರ್.ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿರುವರು. ಉದ್ಘಾಟನಾ ಸಮಾರಂಭದ ಬಳಿಕ ಪ್ರತಿಭಾ ಪ್ರದರ್ಶನ, ಕಲಾ ವೈಭವ, ಮೋಹಿನಿಯಾಟ್ಟಂ, ನಾಟ್ಯ ತರಂಗಿಣಿ, ಅಪರಾಹ್ನ ವಿವಿಧ ಸಂವಾದ ಗೋಷ್ಠಿಗಳು, ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಶನಿವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಶಾಲಾ ಪ್ರಬಂಧಕ ಜಯದೇವ ಖಂಡಿಗೆ, ಪ್ರೊ.ಪಿ.ಎನ್.ಮೂಡಿತ್ತಾಯ, ಕಿಶೋರ್ ಕುಮಾರ್ ಶೇಣಿ, ವಿಶಾಲಾಕ್ಷ ಪುತ್ರಕಳ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಚಂದ್ರಶೇಖರ ಏತಡ್ಕ, ಬಾಲ ಮಧುರಕಾನನ, ನಂದಕಿಶೋರ ಬನಾರಿ, ಡಾ.ಪ್ರವೀಣ್ ರಾಜ್ ಎಸ್.ರಾವ್. ರಾಮಕೃಷ್ಣ ಸಂತಡ್ಕ, ಡಾ.ಶಶಿರಾಜ ನೀಲಂಗಳ, ಶೈಲಜಾ ಟೀಚರ್ ಮೊದಲಾದವರು ಉಪಸ್ಥಿತರಿದ್ದು ಅಂತಿಮ ರೂಪರೇಷೆ ಸಿದ್ದಪಡಿಸಿದರು.

.jpg)
.jpg)
