ಬದಿಯಡ್ಕ: ಕಣ್ಣೂರು ಜಿಲ್ಲೆಯ ಪಯ್ಯನ್ನೂರು ತಾಲೂಕು ಮಾತಮಂಗಲಂ ಎಂಬಲ್ಲಿ ಕ್ಯಾಂಪ್ಕೋ ನಿಯಮಿತ ಸಂಸ್ಥೆಯ ನೂತನ ಶಾಖೆ ಮೇ.26 ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಹಿರಿಯ ರೈತ ಸದಸ್ಯರು ದೀಪಪ್ರಜ್ವಲನೆಗೊಳಿಸಿ ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ನಿರ್ದೇಶಕ ರಾಧಾ
ಕೃಷ್ಣನ್ ಕರಿಂಜಾಲ್ ಸ್ವಾಗತಿಸಲಿರುವರು. ಪಯ್ಯನ್ನೂರು ಶಾಸಕ ಪಿ.ಕುಞÂ್ಞ ಕೃಷ್ಣನ್ ಉದ್ಘಾಟಿಸಲಿರುವರು. ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸುವರು. ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ.ಸತ್ಯನಾರಾಯಣ, ಎರಮಂ ಕುಟ್ಟೂರು ಪಂಚಾಯಿತಿ ಅಧ್ಯಕ್ಷೆ ಪ್ರೀತ ಕೆ., ವಾರ್ಡು ಸದಸ್ಯ ಬಿಂದು ಪಿ.ವಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ ಉಪಸ್ಥಿತರಿರುವರು.

.jpg)
