ಮುಳ್ಳೇರಿಯ: ಮುಳಿಯಾರ್ ಸ್ನೇಹ ಗ್ರಾಮದಲ್ಲಿ ಭಿನ್ನ ಸಾಮಥ್ರ್ಯದ ಮಕ್ಕಳು ಮತ್ತು ಅವರ ಪೋಷಕರ ಮಾನಸಿಕ ಆರೋಗ್ಯವನ್ನು ಉನ್ನತೀಕರಿಸುವ ಉದ್ದೇಶದಿಂದ ಒಂದು ದಿನದ ಸಹ-ಶಿಕ್ಷಣ ಶಿಬಿರ 'ರೇನ್‍ಡ್ರಾಪ್' ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಉದ್ಘಾಟಿಸಿದರು. ಜಿಲ್ಲಾಧಿಕಾರಿಗಳ ಭೇಟಿ ಮತ್ತು ಉಪಸ್ಥಿತಿಯು ಶಿಬಿರದಲ್ಲಿರುವ ಮಕ್ಕಳು ಮತ್ತು ಪೋಷಕರಿಗೆ ಹೆಚ್ಚಿನ ಉತ್ಸಾಹ ಮತ್ತು ಭರವಸೆಯನ್ನು ತಂದಿತು. ಸಮಾರಂಭದ ಅಧ್ಯಕ್ಷತೆಯನ್ನು ಯೋಜನಾ ಸಹಕಾರಿ ಗ್ರೂಪ್ ಕಾರ್ಯಕಾರಿ ಸಮಿತಿ ಸದಸ್ಯೆ ಕೆ. ವಿನೀತಾ ವಹಿಸಿದ್ದರು. ಮುಳಿಯಾರ್ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಬಿ. ಮುಹಮ್ಮದ್ ಕುಂಞÂ ವಿಶೇಷ ಪುರವಣಿ ಬಿಡುಗಡೆಗೊಳಿಸಿದರು.
ಮುಳಿಯಾರ್ ಗ್ರಾಮ ಪಂಚಾಯತಿ ಸದಸ್ಯೆ ಮಿಶ್ರಿಯಾ ರಫೀಕ್, ಶಾಸ್ತಾ ಕ್ಲಬ್ ಮುಂಡಕೈ ಅಧ್ಯಕ್ಷ ಸುನಿಲ್ ಮಳಿಕಲ್, ಪ್ರಾಜೆಕ್ಟ್ ಸಪೆÇೀರ್ಟ್ ಗ್ರೂಪ್ ಖಜಾಂಚಿ ಕೆ. ಮಣಿಕಂಠನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯೆ ಆದಿರಾ ಸುರೇಂದ್ರನ್ ಮಾತನಾಡಿದರು. ಸಹಜೀವನಂ ಸ್ನೇಹ ಗ್ರಾಮ ವ್ಯವಸ್ಥಾಪಕ ಸುರೇಶನ್ ಪುತಿಯಡತ್ ಸ್ವಾಗತಿಸಿ, ಸ್ನೇಹ ಗ್ರಾಮ ಸಮಾಜ ಸೇವಕಿ ಸುರಭಿ ಎಸ್ ನಾಯರ್ ವಂದಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ, ಶಿಬಿರದಲ್ಲಿ ಮಕ್ಕಳು ಮತ್ತು ಪೋಷಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಉದಯನ್ ಕುಂಡಂಗುಳಿ ಮತ್ತು ಜಯನ್ ಕಾಡಗಂ ನೇತೃತ್ವದ ರಂಗಭೂಮಿ ಚಟುವಟಿಕೆ ಮಕ್ಕಳಿಗೆ ವಿಶಿಷ್ಟ ಅನುಭವ ನೀಡಿತು. ಶಿಬಿರದ ಭಾಗವಾಗಿ ಮಕ್ಕಳಿಗಾಗಿ ವಿಶೇಷ 'ಗುಂಪು ಸಭೆಗಳು' ಮತ್ತು ಪೋಷಕರಿಗಾಗಿ 'ಪೆÇೀಷಕರ ಅಧಿವೇಶನ - ಚರ್ಚೆಗಳು' ನಡೆದವು. ಡಿ.ಎ.ಡಬ್ಲ್ಯು.ಎಸ್. ರಾಜ್ಯ ಸಮಿತಿ ಸದಸ್ಯ ಎ. ವೇಣುಗೋಪಾಲ್, ಹಿರಿಯ ಸಲಹೆಗಾರ ವಿಶೇಷ ಶಿಕ್ಷಕಿ ಪಿ.ಎಂ. ಮುಮ್ತಾಜ್ ಮತ್ತು ವಿ. ಶ್ರೀದೇವಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಕೆ.ಆರ್. ವಿನೀತಾ ನಿರ್ವಹಿಸಿದರು. ಯು.ಕೆ. ಶ್ರುತಿ ವಂದಿಸಿದರು.

.jpeg)
.jpeg)
