ಈ ಭಾಷೆಗಳಲ್ಲಿ ಕನಿಷ್ಠ ಎರಡು ಸ್ಥಳೀಯ ಭಾರತೀಯ ಭಾಷೆಗಳಾಗಿರಬೇಕು ಎಂದು ಮಂಡಳಿ ಸ್ಪಷ್ಟಪಡಿಸಿದೆ.
9 ಮತ್ತು 10ನೇ ತರಗತಿಗಳಿಗೆ ಭಾಷಾ ಯೋಜನೆಯನ್ನು ಪರಿಷ್ಕರಿಸಿರುವ ಸಿಬಿಎಸ್‌ಇ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE) 2023ಕ್ಕೆ ಅನುಗುಣವಾಗಿ ತ್ರಿಭಾಷೆಯನ್ನು ಪರಿಚಯಿಸಿರುವುದಾಗಿ ಸ್ಪಷ್ಟಪಡಿಸಿದೆ.
2026-27ನೇ ಶೈಕ್ಷಣಿಕ ವರ್ಷಕ್ಕೆ 9 ಮತ್ತು 10 ನೇ ತರಗತಿಗಳಿಗೆ ಇತ್ತೀಚೆಗೆ ಬಿಡುಗಡೆಯಾದ NCERT ಪಠ್ಯಕ್ರಮವನ್ನು ಪರಿಶೀಲಿಸಿದ ಬಳಿಕ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ. ಪ್ರಸ್ತುತ ಶೈಕ್ಷಣಿಕ ಅವಧಿ ಏಪ್ರಿಲ್ 2026ರಲ್ಲಿ ಪ್ರಾರಂಭವಾಗಿದೆ. ಆದರೆ ಹೊಸ ತ್ರಿಭಾಷೆ ನಿಯಮ ಅನುಷ್ಠಾನಕ್ಕಾಗಿ ಪರಿವರ್ತನೆಯ ವಿಧಾನವನ್ನು ಅನುಸರಿಸಲಾಗುವುದು ಎಂದು ಸಿಬಿಎಸ್‌ಇ ಹೇಳಿದೆ.

ಪರಿಷ್ಕೃತ ಭಾಷಾ ನೀತಿಯಡಿಯಲ್ಲಿ, ವಿದೇಶಿ ಭಾಷೆಯನ್ನು ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು ಇತರ ಎರಡು ಆಯ್ದ ಭಾಷೆಗಳು ಸ್ಥಳೀಯ ಭಾರತೀಯ ಭಾಷೆಗಳಾಗಿದ್ದರೆ ಮಾತ್ರ ಅದನ್ನು ಆಯ್ಕೆ ಮಾಡಬಹುದು. ವಿದೇಶಿ ಭಾಷೆಗಳನ್ನು ಹೆಚ್ಚುವರಿ ನಾಲ್ಕನೇ ಭಾಷೆಯಾಗಿಯೂ ಅಧ್ಯಯನ ಮಾಡಬಹುದು.
ಭಾಷಾ ಶಿಕ್ಷಣಕ್ಕೆ ಸಂಬಂಧಿಸಿದ ನವೀಕರಿಸಿದ ಪಠ್ಯಕ್ರಮದ ಗುರಿಗಳು, ಸಾಮರ್ಥ್ಯಗಳು ಮತ್ತು ಕಲಿಕಾ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವಂತೆ, ಸಿಬಿಎಸ್‌ಇ ಎಲ್ಲಾ ಸಂಯೋಜಿತ ಶಾಲೆಗಳಿಗೆ ನಿರ್ದೇಶನ ನೀಡಿದೆ. ಬೋಧನಾ ಸಂಪನ್ಮೂಲಗಳ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಸಿಬಿಎಸ್‌ಇ, ಮಧ್ಯಮ ಹಂತ ಮತ್ತು ಮಾಧ್ಯಮಿಕ ಹಂತದ ಶಿಕ್ಷಣದ ನಡುವೆ ಓದುವ ಗ್ರಹಿಕೆ, ಮೌಖಿಕ ಸಂವಹನ, ವ್ಯಾಕರಣ ಮತ್ತು ಬರವಣಿಗೆಯ ಕೌಶಲ್ಯಗಳಂತಹ ಭಾಷಾ ಸಾಮರ್ಥ್ಯಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಿದೆ.
R3 ಪಠ್ಯಪುಸ್ತಕಗಳನ್ನು ಪರಿಚಯಿಸುವವರೆಗೆ, 9ನೇ ತರಗತಿಯ ವಿದ್ಯಾರ್ಥಿಗಳು 2026-27 ರ ಶೈಕ್ಷಣಿಕ ಅವಧಿಗೆ ಆಯ್ಕೆಮಾಡಿದ ಭಾಷೆಯ 6ನೇ ತರಗತಿಯ ಆರ್3 ಪಠ್ಯಪುಸ್ತಕಗಳನ್ನು ಬಳಸುತ್ತಾರೆ. ಶಾಲೆಗಳು ಈ ಪಠ್ಯಪುಸ್ತಕಗಳನ್ನು ಕವಿತೆಗಳು, ಸಣ್ಣ ಕಥೆಗಳು ಮತ್ತು ಕಾದಂಬರಿಗಳು ಸೇರಿದಂತೆ ಸ್ಥಳೀಯ ಅಥವಾ ರಾಜ್ಯ ಸಾಹಿತ್ಯಿಕ ವಿಷಯಗಳೊಂದಿಗೆ ಪೂರಕಗೊಳಿಸುವಂತೆ ಕೋರಲಾಗಿದೆ.

ಪರಿಷ್ಕೃತ ರಚನೆಗಳಿಗೆ ಪೂರಕ ವಸ್ತುಗಳ ಆಯ್ಕೆ ಮತ್ತು ಶಿಕ್ಷಣ ಬಳಕೆಯ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಜೂನ್ 15, 2026 ರೊಳಗೆ ನೀಡಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ. ಪರಿವರ್ತನಾ ಅವಧಿಯಲ್ಲಿ ಸ್ಥಳೀಯ ಭಾರತೀಯ ಭಾಷೆಗಳಿಗೆ ಅರ್ಹ ಶಿಕ್ಷಕರನ್ನು ವ್ಯವಸ್ಥೆ ಮಾಡುವಲ್ಲಿ, ಕೆಲವು ಶಾಲೆಗಳು ತೊಂದರೆಗಳನ್ನು ಎದುರಿಸಬಹುದು ಎಂದು ಮಂಡಳಿ ಒಪ್ಪಿಕೊಂಡಿದೆ.
ಸಹೋದಯ ಕ್ಲಸ್ಟರ್‌ಗಳ ಮೂಲಕ ಅಂತರ-ಶಾಲಾ ಸಂಪನ್ಮೂಲ ಹಂಚಿಕೆ, ಹೈಬ್ರಿಡ್ ಬೋಧನಾ ಬೆಂಬಲ, ನಿವೃತ್ತ ಭಾಷಾ ಶಿಕ್ಷಕರ ತೊಡಗಿಸಿಕೊಳ್ಳುವಿಕೆ ಮತ್ತು ಸೂಕ್ತ ಅರ್ಹ ಸ್ನಾತಕೋತ್ತರ ಪದವೀಧರರನ್ನು ನೇಮಿಸಿಕೊಳ್ಳುವಂತಹ ಹೊಂದಿಕೊಳ್ಳುವ ವ್ಯವಸ್ಥೆಗಳನ್ನು ಬಳಸಲು ಸಿಬಿಎಸ್‌ಇ ಶಾಲೆಗಳಿಗೆ ಅವಕಾಶ ನೀಡಿದೆ.
ಜುಲೈ 1, 2026ರ ಮೊದಲು 19 ನಿಗದಿತ ಭಾಷೆಗಳಲ್ಲಿ 6ನೇ ತರಗತಿಯ R3 ಪಠ್ಯಪುಸ್ತಕಗಳು ಶಾಲೆಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕೇಂದ್ರೀಯ ಶಿಕ್ಷಣ ಮಂಡಳಿ ಭರವಸೆ ನೀಡಿದೆ. ಇತ್ತೀಚಿಗೆ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.