ತಿರುವನಂತಪುರಂ: ಶಿವಗಿರಿ ಮಠದ ನಿರೀಕ್ಷೆಗಳನ್ನು ನಿಯೋಜಿತ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರಿಗೆ ಭೇಟಿಯಾಗಿ ತಿಳಿಸಿರುವುದಾಗಿ ಶಿವಗಿರಿ ಶ್ರೀ ನಾರಾಯಣ ಧರ್ಮಸಂಘಮ್ ಟ್ರಸ್ಟ್ ಕಾರ್ಯದರ್ಶಿ ಸ್ವಾಮಿ ಸಚ್ಚಿದಾನಂದ ಅವರು ತಿಳಿಸಿರುವರು. ಶಿವಗಿರಿ ಮಠ ಮತ್ತು ಶ್ರೀ ನಾರಾಯಣ ಚಳುವಳಿಗಳೊಂದಿಗೆ ಸಂಬಂಧ ಹೊಂದಿರುವ ಒಂಬತ್ತು ಜನರು ಈ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಮತ್ತು ಕನಿಷ್ಠ ಮೂರು ಅಥವಾ ನಾಲ್ಕು ಸೂಕ್ತ ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮುಖ್ಯಮಂತ್ರಿಯನ್ನು ವಿನಂತಿಸಿದ್ದೇನೆ ಎಂದು ಅವರು ಹೇಳಿದರು.
ಕೇರಳದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯನ್ನು ಮಠದೊಂದಿಗೆ ಸಂಬಂಧ ಹೊಂದಿರುವವರಿಗೆ ನೀಡಬೇಕು ಎಂಬುದು ಬೇಡಿಕೆಯಾಗಿದೆ. ಸಚಿವರ ವೈಯಕ್ತಿಕ ಸಿಬ್ಬಂದಿಯನ್ನು ನಿರ್ವಹಿಸುವ ಮತ್ತು ನೇಮಿಸುವ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊಂದಿರಬೇಕು ಎಂದು ಸಚ್ಚಿದಾನಂದ ಸ್ವಾಮಿಗಳು ಒತ್ತಾಯಿಸಿದರು.
ಆರು ಜನರನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದರೂ, ಕನಿಷ್ಠ ಮೂರು-ನಾಲ್ಕು ಜನರಿಗೆ ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಹೆಚ್ಚಿನ ಭರವಸೆಯನ್ನು ಮಠ ಹೊಂದಿದೆ ಮತ್ತು ಮುಖ್ಯಮಂತ್ರಿ ಇದನ್ನು ಜಾರಿಗೆ ತರುತ್ತಾರೆ ಎಂಬ ನಿರೀಕ್ಷೆ ಇರುವುದಾಗಿ ಸ್ವಾಮಿ ಸಚ್ಚಿದಾನಂದ ಹೇಳಿವರೆಂದು ಕೇರಳ ಕೌಮುದಿ ಸಂಪಾದಕೀಯವು ತಿಳಿಸಿದೆ.

