ಇಂದಿನ ಸ್ಮಾರ್ಟ್‌ಫೋನ್‌ಗಳು ಕೇವಲ ಕರೆ ಅಥವಾ ಮೆಸೇಜ್ ಮಾಡಲು ಮಾತ್ರ ಸೀಮಿತವಾಗಿಲ್ಲ. ಮುಖ್ಯವಾಗಿ Android ಫೋನ್‌ಗಳಲ್ಲಿ Artificial Intelligence (AI) ಆಧಾರಿತ ಹಲವು ಸ್ಮಾರ್ಟ್ ವೈಶಿಷ್ಟ್ಯಗಳು ಅಡಗಿವೆ. ಬಹುತೇಕ ಜನರು ಪ್ರತಿದಿನ ಫೋನ್ ಬಳಸುತ್ತಿದ್ದರೂ, ಈ ಫೀಚರ್‌ಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸುತ್ತಿಲ್ಲ. ಎಐ ತಂತ್ರಜ್ಞಾನ ಈಗ ಕ್ಯಾಮೆರಾ, ಬ್ಯಾಟರಿ, ಸೆಕ್ಯುರಿಟಿ, ವಾಯ್ಸ್ ಕಮಾಂಡ್ ಮತ್ತು ದೈನಂದಿನ ಕಾರ್ಯಗಳನ್ನು ಹೆಚ್ಚು ಸುಲಭಗೊಳಿಸುತ್ತಿದೆ. ಕೆಲವು ಫೀಚರ್‌ಗಳು ನಿಮ್ಮ ಬಳಕೆಯ ಅಭ್ಯಾಸವನ್ನು ಕಲಿತು ಆಟೋಮ್ಯಾಟಿಕ್ ಆಗಿ ಕೆಲಸ ಮಾಡುತ್ತವೆ. ಹಾಗಾದರೆ ಆಂಡ್ರಾಯ್ಡ್ ಫೋನ್‌ನಲ್ಲಿ ಇರುವ ಕೆಲವು ಸೀಕ್ರೆಟ್ ಎಐ ಫೀಚರ್‌ಗಳ ಬಗ್ಗೆ ಮುಂದೆ ತಿಳಿಯೋಣ.
AI ಕಾಲ್ ಸ್ಕ್ರೀನಿಂಗ್
ಎಐ ಕಾಲ್ ಸ್ಕ್ರೀನಿಂಗ್ ಉಪಯುಕ್ತ ಫೀಚರ್ ಎನ್ನಬಹುದಾಗಿದೆ. ಕೆಲವು Android ಫೋನ್‌ಗಳಲ್ಲಿ ಅಪರಿಚಿತ ಕರೆಗಳನ್ನು ಎಐ ಸ್ವಯಂ ವಿಶ್ಲೇಷಿಸಿ ಸ್ಪ್ಯಾಮ್ ಅಥವಾ ಫ್ರಾಡ್ ಕರೆಗಳ ಬಗ್ಗೆ ಮುಂಚಿತ ಎಚ್ಚರಿಕೆ ನೀಡುತ್ತದೆ. ಇದರಿಂದ ಅನಗತ್ಯ ಕರೆಗಳಿಂದ ತಪ್ಪಿಸಿಕೊಳ್ಳಬಹುದು.
ಎಐ ಫೋಟೋ ಎನ್‌ಹ್ಯಾನ್ಸರ್
ಎಐ ಫೋಟೋ Enhancement ಆಯ್ಕೆ ಕೂಡಾ ಉಪಯುಕ್ತ ಎನಿಸುತ್ತದೆ. ಈಗಿನ Android ಸ್ಮಾರ್ಟ್‌ಫೋನ್ ಕ್ಯಾಮೆರಾಗಳು ಫೋಟೋ ತೆಗೆದ ಬಳಿಕ ಎಐ ಸಹಾಯದಿಂದ ಬಣ್ಣ, ಬೆಳಕು ಮತ್ತು ಕ್ಲಾರಿಟಿಯನ್ನು ಸ್ವಯಂಚಾಲಿತವಾಗಿ ಸುಧಾರಿಸುತ್ತವೆ. ಮಂದ ಬೆಳಕಿನಲ್ಲಿ ತೆಗೆದ ಫೋಟೋಗಳು ಹೆಚ್ಚು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ.
ಲೈವ್ ಕ್ಯಾಪ್ಶನ್
ಬಹುತೇಕ ಜನರಿಗೆ ತಿಳಿದಿರದ ಮತ್ತೊಂದು ಫೀಚರ್ Live Caption. ಫೋನ್‌ನಲ್ಲಿ ವಿಡಿಯೋ ಅಥವಾ ಆಡಿಯೋ ಪ್ಲೇ ಮಾಡಿದಾಗ ಎಐ ತಕ್ಷಣವೇ ಸಬ್‌ಟೈಟಲ್ ರಚಿಸುತ್ತದೆ. ಇಂಟರ್‌ನೆಟ್ ಇಲ್ಲದಿದ್ದರೂ ಕೆಲವು ಫೋನ್‌ಗಳಲ್ಲಿ ಈ ಫೀಚರ್ ಕೆಲಸ ಮಾಡುತ್ತದೆ. ಕೇಳುವ ಸಮಸ್ಯೆಯಿರುವವರಿಗೆ ಇದು ತುಂಬಾ ಸಹಾಯಕ.
ಎಐ ಬ್ಯಾಟರಿ ಆಪ್ಟಿಮೈಜೆಶನ್
ಎಐ ಬ್ಯಾಟರಿ Optimization ಕೂಡ Android ಫೋನ್‌ಗಳ ಪ್ರಮುಖ ಫೀಚರ್ಸ್‌ಗಳಾಗಿವೆ. ನೀವು ಯಾವ ಆಪ್‌ಗಳನ್ನು ಹೆಚ್ಚು ಬಳಸುತ್ತೀರಿ ಎಂಬುದನ್ನು ಎಐ ಗಮನಿಸಿ ಬ್ಯಾಟರಿ ಬಳಕೆಯನ್ನು ನಿಯಂತ್ರಿಸುತ್ತದೆ. ಇದರಿಂದ ಬ್ಯಾಟರಿ ಹೆಚ್ಚು ಸಮಯ ಬ್ಯಾಕ್ ಒದಗಿಸಲು ಸಹಾಯಕ ಆಗುತ್ತದೆ.
ವಾಯ್ಸ್ ಅಸಿಸ್ಟಂಟ್
ವಾಯ್ಸ್ ಅಸಿಸ್ಟಂಟ್ ಫೀಚರ್ ಈಗ ಹೆಚ್ಚು ಸ್ಮಾರ್ಟ್ ಆಗಿದೆ. Hey Google ಎಂದು ಹೇಳುವುದರ ಮೂಲಕ ಕರೆ ಮಾಡುವುದು, ಅಲಾರಂ ಸೆಟ್ ಮಾಡುವುದು, ಮೆಸೇಜ್ ಕಳುಹಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಕೈ ಮುಟ್ಟದೇ ಮಾಡಬಹುದು. ಎಐ ನಿಮ್ಮ ಬಳಕೆಯ ಅಭ್ಯಾಸವನ್ನು ಕಲಿತು ಇನ್ನಷ್ಟು ನಿಖರ ಪ್ರತಿಕ್ರಿಯೆ ನೀಡುತ್ತದೆ.
ಎಐ ಆಧಾರಿತ ಸೆಕ್ಯುರಿಟಿ ಆಯ್ಕೆ
ಕೆಲವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಎಐ ಆಧಾರಿತ ಸೆಕ್ಯುರಿಟಿ ಆಯ್ಕೆಯು ಇದೆ. ಅನುಮಾನಾಸ್ಪದ ಲಿಂಕ್‌ಗಳು, ನಕಲಿ ವೆಬ್‌ಸೈಟ್‌ಗಳು ಅಥವಾ ಅಪಾಯಕಾರಿ ಆಪ್‌ಗಳನ್ನು ಎಐ ಗುರುತಿಸಿ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಇದು ಸೈಬರ್ ಮೋಸಗಳಿಂದ ರಕ್ಷಣೆ ನೀಡಲು ಸಹಾಯ ಮಾಡುತ್ತದೆ.
ಒಟ್ಟಾರೇ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇರುವ ಎಐ ಫೀಚರ್‌ಗಳು ಕೇವಲ ಹೊಸ ತಂತ್ರಜ್ಞಾನವಲ್ಲ ಅವು ನಮ್ಮ ದಿನನಿತ್ಯದ ಜೀವನವನ್ನು ಹೆಚ್ಚು ಸುಲಭ ಮತ್ತು ಸ್ಮಾರ್ಟ್ ಆಗಿಸುತ್ತಿವೆ. ಹಲವರು ಬಳಸದೇ ಇರುವ ಈ ಹಿಡೆನ್ ಫೀಚರ್ಸ್‌ಗಳನ್ನು ತಿಳಿದುಕೊಂಡರೆ ಸ್ಮಾರ್ಟ್‌ಫೋನ್ ಅನುಭವ ಇನ್ನಷ್ಟು ಉತ್ತಮವಾಗುತ್ತದೆ.

