HEALTH TIPS

ತಂದೆ ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವ; ಮಗ ಸುವೇಂದು ಬಂಗಾಳದಲ್ಲಿ BJPಯ ಮೊದಲ CM

15 ವರ್ಷಗಳಿಂದ ತೃಣಮೂಲ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದ ಪಶ್ಚಿಮ ಬಂಗಾಳದಲ್ಲಿ ಇನ್ನು ಬಿಜೆಪಿ ಆಡಳಿತ. ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಎದುರು ಗೆದ್ದ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಆ ಮೂಲಕ ರಾಜ್ಯದಲ್ಲಿ ಕೇಸರಿ ಪಕ್ಷದ ಮೊದಲ ಮುಖ್ಯಮಂತ್ರಿ ಎನ್ನಿಸಿಕೊಳ್ಳಲು ಸಜ್ಜಾಗಿದ್ದಾರೆ.

ತೃಣಮೂಲ ಕಾಂಗ್ರೆಸ್‌ನಲ್ಲಿದ್ದು, ಮಮತಾ ಬ್ಯಾನರ್ಜಿಯ ಆಪ್ತರಾಗಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ, ಈಗ ಮಮತಾರನ್ನೇ ಸೋಲಿಸಿದ್ದಾರೆ.

ಸುವೇಂದು ಹಿನ್ನೆಲೆಯೇನು?

1970 ಡಿಸೆಂಬರ್ 15 ರಂದು ಮೇದಿನಿಪುರದ ಕರ್ಕುಲಿ ಗ್ರಾಮದಲ್ಲಿ ಜನಿಸಿದ ಅಧಿಕಾರಿ, ಕರಾವಳಿ ಬಂಗಾಳದ ಅತ್ಯಂತ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದವರು. ಸುವೇಂದು ಅವರ ತಂದೆ ಶಿಶಿರ್ ಅಧಿಕಾರಿ, ಮನಮೋಹನ್ ಸಿಂಗ್ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದರು.

1995 ರಲ್ಲಿ ಕಾಂತಿ ಪುರಸಭೆಯಲ್ಲಿ ಕಾಂಗ್ರೆಸ್ ಕೌನ್ಸಿಲರ್ ಆಗಿ ಅಧಿಕಾರ ವಹಿಸಿಕೊಂಡ ಸುವೇಂದು, 1998 ರಲ್ಲಿ ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಸೇರಿದರು. 2006 ರಲ್ಲಿ ವಿಧಾನಸಭೆ ಪ್ರವೇಶಿಸಿದ ಅವರು ಕೊಂಟೈ ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು, 2009 ರಲ್ಲಿ ತಮ್ಲುಕ್ ನಿಂದ ಸಿಪಿಐ(ಎಂ) ನ ಪ್ರಬಲ ನಾಯಕ ಲಕ್ಷ್ಮಣ ಸೇಠ್ ಅವರ ವಿರುದ್ಧ ಜಯಸಾಧಿಸಿದರು. 2014 ರಲ್ಲೂ ಆ ಸ್ಥಾನವನ್ನು ಉಳಿಸಿಕೊಂಡರು.

2007ರ ನಂದಿಗ್ರಾಮ ಆಂದೋಲನದ ಸಮಯದಲ್ಲಿ ಸುವೇಂದು ಮಮತಾ ಅವರ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.

ಮಮತಾ ಜೊತೆ ಬಿರುಕು

ಮಮತಾ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು 'ಅಖಿಲ ಭಾರತ ತೃಣಮೂಲ ಯುವ' ಘಟಕದ ಅಧ್ಯಕ್ಷರನ್ನಾಗಿ ಘೋಷಿಸಿದ್ದರು. ಇದರಿಂದ ಕೆರಳಿದ ಸುವೇಂದು, ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳಿಂದ ಅಂತರ ಕಾಯ್ದುಕೊಂಡರು. ನಂತರ 2020ರಲ್ಲಿ ಬಿಜೆಪಿಗೆ ಸೇರಿದರು.

2021ರಲ್ಲಿ ಬಿಜೆಪಿಯಿಂದ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದ ಸುವೇಂದು, ಮಮತಾ ಅವರನ್ನು ಸೋಲಿಸಿದ್ದರು. ಈಗ 2026ರಲ್ಲಿ ಭವಾನಿಪುರದಲ್ಲೂ ಮಮತಾ ಅವರನ್ನು 15 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.

25 ಕ್ರಿಮಿನಲ್ ಪ್ರಕರಣ

2026 ರ ಚುನಾವಣಾ ಅಫಿಡವಿಟ್ ಪ್ರಕಾರ, ಸುವೇಂದು ವಿರುದ್ಧ 25 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನವು 2020 ರ ಪಕ್ಷಾಂತರದ ನಂತರ ದಾಖಲಾಗಿವೆ. ಅವುಗಳಲ್ಲಿ ಮುಖ್ಯವಾದ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ಆರೋಪಗಳನ್ನು ಅವರು ನಿರಾಕರಿಸಿದ್ದು, ಅವು ರಾಜಕೀಯ ಪ್ರೇರಿತ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries