ಕಾಸರಗೋಡು: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಗೆ ಡಿಕ್ಕಿಯಾಗಿ ಹಾನಿಗೊಳಿಸಿದ ಬಳಿಕ ಬೋಟ್ ನಿಲ್ಲದೆ ಪರಾರಿಯಾಗಿರುವ ಬಗ್ಗೆ ಕುಂಬಳೆ ಕರಾವಳಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮಿಳುನಾಡು ಕನ್ಯಾಕುಮಾರಿ ಚಿನ್ನತುರೈ ನಿವಾಸಿ, ಸ್ಟಾಂಕ್ ಮೀನುಗಾರಿಕಾ ದೋಣಿಯ ಚಾಲಕ ಆಂಟನಿ (51) ಎಂಬವರು ಈ ಬಗ್ಗೆ ದೂರು ನೀಡಿದ್ದು, ಬೀದರ್‍ನ ಓಶಿಯನ್ ರೇಡಿಯನ್ಸ್ ಎಂ.ಎಂ.ಎಸ್ ಎಂಬ ಹೆಸರಿನ ಟಗ್ ಬೋಟ್‍ನ ಮಾಲಿಕರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಗುಜರಾತ್‍ನ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿದ ಬಳಿಕ ಮೀನಿನೊಂದಿಗೆ ಬೋಟ್‍ನಲ್ಲಿ ತಮಿಳುನಾಡಿಗೆ ಹಿಂದಿರುಗುತ್ತಿದ್ದ ದಾರಿ ಮಧ್ಯೆ, ಮಂಜೇಶ್ವರ ಮೀನುಗಾರಿಕಾ ಬಂದರಿನಿಂದ ಸುಮಾರು ಎಂಟು ನಾಟಿಕಲ್ ಮೈಲ್ ದೂರದ ಸಮುದ್ರಕ್ಕೆ ತಲುಪಿದಾಗ ಎದುರಿನಿಂದ ಬರುತ್ತಿದ್ದ ಬೀದರ್‍ನ ಟಗ್ ಬೋಟ್ ಡಿಕ್ಕಿಯಾದ ಪರಿಣಾಮ ನಮ್ಮ ಬೋಟ್ ಹಾನಿಗೀಡಾಗಿದ್ದು, ಡಿಕ್ಕಿಯಾದ ಟಗ್ ಬೋಟ್ ನಿಲ್ಲಿಸದೆ ಮಂಗಳೂರು ಭಾಗಕ್ಕೆ ಪರಾರಿಯಾಗಿರುವುದಾಗಿ ಪೋಲೀಸರಿಗೆ ನೀಡಿದ ದೂರಿನಲ್ಲಿ ಆಂಟನಿ ತಿಳಿಸಿದ್ದಾರೆ.



