HEALTH TIPS

ಸೇವಾ ಭಾರತಿ ಕಾಸರಗೋಡು ಜಿಲ್ಲಾ ಆಶ್ರಯ ಕೇಂದ್ರದ ಉದ್ಘಾಟನೆ

ಕಾಸರಗೋಡು: ಪ್ರತಿಯೊಂದು ಮನೆಯೂ ಆಶ್ರಯ ಕೇಂದ್ರವಾದಾಗ ಸೇವಾಭಾರತಿ 'ಆಶ್ರಯ ಕೇಂದ್ರ'ದ ಉದ್ದೇಶ ಈಡೇರಲು ಸಾಧ್ಯ ಎಂಬುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.


ಅವರು ಸೇವಾ ಭಾರತಿ ಕಾಸರಗೋಡು ಜಿಲ್ಲಾ ಆಶ್ರಯ ಕೇಂದ್ರದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನಿಡಿದರು.  ಸೇವಾ ಭಾರತಿಯ ಸೇವಾ ಕೈಂಕರ್ಯದಿಂದ ಸಮಾಜದಲ್ಲಿ ಸೇವಾಮನೋಭಾವ ಹೆಚ್ಚಲು ಕರಣವಾಗಿದೆ ಎಂದು ತಿಳಿಸಿದರು.   ಜಿಲ್ಲಾಧ್ಯಕ್ಷ ಶ್ರೀ ಎಂ.ಟಿ. ದಿನೇಶ್ ಅಧ್ಯಕ್ಷತೆ ವಹಿಸಿದ್ದರು.  ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶ್ರೀರಾಮ್ ಶಂಕರ್ ಆಶ್ರಯ ಕೇಂದ್ರದ ದರ್ಶನವನ್ನು ಮಂಡಿಸಿದರು. ಉತ್ತರ ಕೇರಳ ಪ್ರಾಂತ ಸೇವಾಪ್ರಮುಖ  ಎಂ.ಸಿ. ವಲ್ಸನ್ ಸೇವಾ ಸಂದೇಶ ನೀಡಿದರು. ಡಾ.  ಸುರೇಶ್ ಮಲ್ಯ ಮತ್ತು ನಗರಸಭಾ ಸದಸ್ಯೆ  ಶ್ರುತಿ ಉಪಸ್ಥಿತರಿದ್ದರು.  ಈ ಸಂದರ್ಭ ಸೇವಭಾರತಿ ಆಶ್ರಯ ಕೇಂದ್ರದ ಜಿಲ್ಲಾ ಕಚೇರಿಯನ್ನು ನಿರ್ಮಿಸಿ ಸೇವಾ ಭಾರತಿಗೆ ಸಮರ್ಪಿಸಿದ  ಜಯಶ್ರೀ ಅಮ್ಮ ಮತ್ತು ಕಾಸರಗೋಡು ಪ್ರದೇಶದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕುಞÂರಾಮನ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.  ಕೇರಳ, ಕರ್ನಾಟಕ ರಾಜ್ಯದ ಸಾಂಸ್ಕøತಿಕ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು. ಆಶ್ರಯ ಕೇಂದ್ರದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ 35 ಜನರು ರಕ್ತದಾನ ಮಾಡಿದರು. ಇದೇ ಸಂದರ್ಭ ಮರವಾಗಿ ಬೆಳೆಯಬಲ್ಲ 500 ಸಸಿಗಳನ್ನು ವಿತರಿಸಲಾಯಿತು.  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸಂಗೀತ ವಿಜಯನ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀ ಟಿ.ವಿ. ಅಶೋಕನ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries