ಕಾಸರಗೋಡು: ನಗರದ ಚಿತ್ರಮಂದಿರಕ್ಕೆ ಆಗಮಿಸಿದ್ದ ಫಿಲ್ಮ್ ರೆಪ್ರಸೆಂಟೇಟಿವ್ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಕೋಟ್ಟಾಯಂ ಏಟ್ಟುಮನ್ನೂರ್ ನಿವಾಸಿ, ಕಣ್ಣೂರು ಕಣ್ಣಪುರಂ ಮೊಟ್ಟಮ್ಮಲ್‍ನಲ್ಲಿ ವಾಸಿಸುತ್ತಿರುವ ಕೆ.ಆರ್ ಸುನಿಲ್ ಕುಮಾರ್(68)ಮೃತಪಟ್ಟವರು.
ಶನಿವಾರ ನಗರದ ಚಿತ್ರಮಂದಿರಕ್ಕೆ ಆಗಮಿಸಿದ್ದ ಇವರಿಗೆ ಉಸಿರಾಟ ಸಮಸ್ಯೆ ಎದುರಗಿದ್ದು, ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರ ಠಾಣಾ ಪೊಲೀಸರು ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.

