ಟೆಹರಾನ್: ಸೋಮವಾರ ಅಮೆರಿಕದ ಯುದ್ಧನೌಕೆಗಳು ಹಾರ್ಮುಝ್ ಜಲಸಂಧಿಯನ್ನು ಪ್ರವೇಶಿಸುವುದನ್ನು ಇರಾನ್‍ನ ನೌಕಾಪಡೆ ತಡೆದಿದೆ. ಜಸ್ಕ್ ದ್ವೀಪದ ಬಳಿ ಇರಾನ್‍ನ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಅಮೆರಿಕದ ಯುದ್ಧ ನೌಕೆಯ ಮೇಲೆ ಎರಡು ಕ್ಷಿಪಣಿ ದಾಳಿ ನಡೆದಿದೆ ಎಂದು ಇರಾನ್‍ನ ಸರ್ಕಾರಿ ಸ್ವಾಮ್ಯದ ಟಿವಿ ವರದಿ ಮಾಡಿದೆ.
ಜಲಸಂಧಿಯನ್ನು ಪ್ರವೇಶಿಸುವ ದಕ್ಷಿಣದ ದ್ವಾರದ ಬಳಿಯ ಜಸ್ಕ್ ಬಂದರಿನ ಬಳಿ ಚಲಿಸುತ್ತಿದ್ದ ಯುದ್ಧನೌಕೆಯ ಮೇಲೆ ಎರಡು ಕ್ಷಿಪಣಿಗಳನ್ನು ಪ್ರಯೋಗಿಸಿದ ಬಳಿಕ ನೌಕೆಯು ಹಿಂದಿರುಗಿದೆ. ಹಾರ್ಮುಝ್ ಜಲಸಂಧಿಯನ್ನು ದಾಟುವ ಪ್ರಯತ್ನ ನಡೆಸದಂತೆ ಹಲವು ವಿದೇಶಿ ನೌಕೆಗಳಿಗೆ ಸೋಮವಾರ ಇರಾನ್‍ನ ಸಶಸ್ತ್ರ ಪಡೆಗಳು ಎಚ್ಚರಿಕೆ ನೀಡಿವೆ ಎಂದು ವರದಿ ಹೇಳಿದೆ. ಆದರೆ ಈ ವರದಿಯನ್ನು ಅಮೆರಿಕ ನಿರಾಕರಿಸಿದೆ.

