ಟೆಹರಾನ್: ಹಾರ್ಮುಝ್‌ನಿಂದ ದೂರ ಇರುವಂತೆ ಅಮೆರಿಕಕ್ಕೆ ಇರಾನ್‍ನ ಮಿಲಿಟರಿ ಸೋಮವಾರ ಎಚ್ಚರಿಕೆ ನೀಡಿದ್ದು ಹಾರ್ಮುಝ್ ಜಲಸಂಧಿಯನ್ನು ಪ್ರವೇಶಿಸಿದರೆ ಅಮೆರಿಕದ ಪಡೆಗಳ ಮೇಲೆ ದಾಳಿ ನಡೆಸುವುದಾಗಿ ಹೇಳಿದೆ.
ಇರಾನ್‍ನೊಂದಿಗೆ ಸಮನ್ವಯ ಸಾಧಿಸದ ಹೊರತು ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕರ್‍ಗಳು ಹಾರ್ಮುಜ್ ದಾಟುವಂತಿಲ್ಲ.
ಯಾವುದೇ ವಿದೇಶಿ ಸಶಸ್ತ್ರ ಪಡೆಗಳು, ವಿಶೇಷವಾಗಿ ಆಕ್ರಮಣಕಾರಿ ಅಮೆರಿಕದ ಸೇನೆ ಹಾರ್ಮುಝ್ ಪ್ರವೇಶಿಸಲು ಮುಂದಾದರೆ ದಾಳಿಗೆ ಗುರಿಯಾಗಲಿವೆ ಎಂದು ಇರಾನ್ ಮಿಲಿಟರಿ ಎಚ್ಚರಿಕೆ ನೀಡಿದೆ.

