ಕಾಸರಗೋಡು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕರದ ಕ್ರಮ ಖಂಡಿಸಿ ಕೆಎಸ್‍ಯು ಕೆಎಸ್‍ಯು ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬೈಕ್‍ಗಳನ್ನು ರಸ್ತೆಯಲ್ಲಿ ತಳ್ಳಿಕೊಂಡು ಸಾಗುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಕಾಸರಗೋಡಿನ ಹೊಸ ಬಸ್ ನಿಲ್ದಾಣದಿಂದ ಪ್ರೆಸ್ ಕ್ಲಬ್ ಜಂಕ್ಷನ್‍ನಲ್ಲಿರುವ ಪೆಟ್ರೋಲ್ ಪಂಪ್‍ವರೆಗೆ ಪ್ರತಿಭಟನೆ ನಡೆಯಿತು.
ಎಐಸಿಸಿ ಕೋರ್ಡಿನೇಟರ್ ಮನಾಫ್ ನುಳ್ಳಿಪಾಡಿ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿ, ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿ ವಿದೇಶ ಪ್ರವಾಸ ನಡೆಸುತ್ತಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಸರ್ಕಾರ ಮೌನವಹಿಸಿರುವುದಾಗಿ ತಿಳಿಸಿದರು. ಕೆಎಸ್‍ಯು ಕಾಸರಗೋಡು ಜಿಲ್ಲಾಧ್ಯಕ್ಷ ವಕೀಲ ಜಾವೇದ್ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಖಿಲ್ ಜಾನ್, ವಿಷ್ಣು ಇರಿಯಣ್ಣಿ, ಸುಜಿತ್ ಎಸ್, ವೈಷ್ಣವ್ ಕೋಳಿಚ್ಚಾಲ್, ಶಾಜಾ ಪಟ್ಲ ನೇತೃತ್ವ ವಹಿಸಿದ್ದರು.ಜಿಲ್ಲಾ ಕಾರ್ಯದರ್ಶಿ ಆದರ್ಶ್ ಕೆ ಸ್ವಾಗತಿಸಿದರು. ಅನ್ಸಾರಿ ವಂದಿಸಿದರು.

