ಕುಂಬಳೆ: ಅಂಗಡಿಮೊಗರು ಒಡುವಾರ್ ಅಮಾನತುಲ್ ಇಸ್ಲಾಂ ಮದರಸಾದ ವಾರ್ಷಿಕ ಧಾರ್ಮಿಕ ಜ್ಞಾನ ಸಮ್ಮೇಳನ ಮೇ 09 ರಿಂದ 13ರ ವರೆಗೆ ಒಡುವಾರ್ ಬದರ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶನಿವಾರ ಸಂಜೆ 7ಕ್ಕೆ ಸಯ್ಯದ್ ಕೆ.ಎಸ್. ಅಟ್ಟಕ್ಕೋಯ ತಂಙಳ್ ಕುಂಬೋಲ್ ಉದ್ಘಾಟಿಸುವರು. ಡಾ. ಫಾರೂಕ್ ನಯಿಮಿ ಕೊಲ್ಲಂ ಹಿಜ್ರಾ ದಂಡಯಾತ್ರೆಯನ್ನು ನಡೆಸಿಕೊಡಲಿದ್ದಾರೆ.
ಭಾನುವಾರ ಮತ್ತು ಸೋಮವಾರ ರಾತ್ರಿ 8ಕ್ಕೆ ಪ್ರಸಿದ್ಧ ವಾಗ್ಮಿ ಜುಬೈರ್ ಮಾಸ್ತರ್ ತೊಟ್ಟಿಕಲ್ ತಂಡ ಇಸ್ಲಾಮಿಕ್ ಕಥಾ ಸಂವಾದವನ್ನು ಪ್ರಸ್ತುತಪಡಿಸಲಿದ್ದಾರೆ.
ಮಂಗಳವಾರ ರಾತ್ರಿ ನೌಶಾದ್ ಬಾಖವಿ ಚಿರಾಯಕೀಜ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಬುಧವಾರ ಸಂಜೆ 4ಕ್ಕೆ ಅನಿವಾಸಿ ಸಮಾವೇಶ ಹಾಗೂ ಸಾಂಸ್ಕøತಿಕ ಸಮ್ಮೇಳನ ನಡೆಯಲಿದೆ.
ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಜಿಲ್ಲಾ ಪಂಚಾಯತಿ ಸದಸ್ಯ ಸೋಮಶೇಖರ ಜೆ.ಎಸ್., ಬ್ಲಾಕ್ ಪಂಚಾಯತಿ ಸದಸ್ಯ ಬಶೀರ್ ಕೊಟ್ಟುಡಳ್, ಗ್ರಾ.ಪಂ.ಸದಸ್ಯ ಶ್ರೀನಿವಾಸ ಮಾಸ್ತರ್ ಮೊದಲಾದವರು ಶುಭಾಶಂಸನೆಗೈಯ್ಯುವರು. ರಾತ್ರಿ 8ಕ್ಕೆ ವಾರ್ಷಿಕ ಸ್ವಲಾತ್ ಮತ್ತು ಪ್ರಾರ್ಥನಾ ಸಭೆಯನ್ನು ಕಂಬಾರ್ ಜುಮಾ ಮಸೀದಿ ಖತೀಬರು ಉದ್ಘಾಟಿಸುವರು. ಸಲಾಂ ಫೈಝಿ. ರಶೀದ್ ಹಿಮಾಮಿ ಸಖಾಫಿ ಪಳ್ಳತ್ತೂರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಸುದ್ದಿಗೋಷ್ಠಿಯಲ್ಲಿ ಸದರ್ ಜುಮಾ ಮಸೀದಿ ಖತೀಬ್ ರಶೀದ್ ಹಿಮಾಮಿ ಸಖಾಫಿ ಪಳ್ಳತ್ತೂರು, ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಒಡುವಾರ್, ಸ್ವಾಗತ ಸಮಿತಿ ಅಧ್ಯಕ್ಷ ರಫೀಕ್ ರೋಲೆಕ್ಸ್, ಸಂಚಾಲಕ ಹಾರಿಸ್ ಸಿ.ಎಚ್., ಜಮಾಅತ್ ಉಪಾಧ್ಯಕ್ಷ ಹುಸೈನ್ ಮುಬಾರಕ್, ಪಿ.ಟಿ.ಎ ಅಧ್ಯಕ್ಷ ಮುನೀರ್ ಕಾನಡ್ಕ, ಜಮಾಅತ್ ಜೊತೆ ಕಾರ್ಯದರ್ಶಿ ಬಶೀರ್ ಒಡುವಾರ್ ಉಪಸ್ಥಿತರಿದ್ದರು.

.jpg)
.jpg)
