HEALTH TIPS

ಪೆರ್ಲ ನೇತಾಜಿ ಗ್ರಂಥಾಲದಲ್ಲಿ ರೀಡಿಂಗ್ ಥಿಯೇಟರ್

ಪೆರ್ಲ: ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯದಲ್ಲಿ ಬಾಲವೇದಿಕೆಯ ಮಕ್ಕಳ ವಾಚನಾ ಕಳರಿ ಅಂಗವಾಗಿ ರೀಡಿಂಗ್ ಥೀಯೇಟರ್ ಕಾರ್ಯಕ್ರಮ ಜರಗಿತು.


ಕವಿ ಶ್ರೀನಿವಾಸ ಪೆರಿಕ್ಕಾನ ರೀಡಿಂಗ್ ಥಿಯೇಟರ್ ಉದ್ಘಾಟಿಸಿ ಒಚಿಖಿಓಚಿWI, ಮಕ್ಕಳ ರಚನಾ ಕೌಶಲ್ಯತೆ ಎಳೆವೆಯಲ್ಲೇ ಬೆಳೆಯಲು ವಾಚನಾ ಕಳರಿ ಹೊಸ ಭರವಸೆಯನ್ನು ಮೂಡಿಸುತ್ತಿದೆ. ಅವರಿಗೆ ಅವಕಾಶಗಳನ್ನು ಒದಗಿಸಿಕೊಡುವುದು ಅತ್ಯುತ್ತಮ ಕೆಲಸವಾಗಿದೆ ಎಂದು ನುಡಿದರು.

ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ರಂಗಕರ್ಮಿ ಅಶೋಕ್ ಮಾಸ್ತರ್ ಕೊಡ್ಲಮೊಗರು ತರಗತಿ ನಡೆಸಿದರು. ನಾಟಕ ಓದು, ಕಥಾ ಓದು ಮುಂತಾದ ಸಾಹಿತ್ಯ ಪ್ರಕಾರಗಳನ್ನು ರೀಡಿಂಗ್ ಥಿಯೇಟರ್ ನಲ್ಲಿ ಅಳವಡಿಸುವಿಕೆಯ ಅಂಶಗಳ ಬಗ್ಗೆ ಪರಿಣಾಮಕಾರಿಯಾಗಿ ತರಗತಿ ನಡೆಸಿ ಮಕ್ಕಳಲ್ಲಿ ಉತ್ತಮ ಓದುಗಾರನಲ್ಲಿರಬೇಕಾದ ಗುಣಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಂಥಾಲಯದ ಅಧ್ಯಕ್ಷ ರಾಮಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ವಿನೋದ್ ಅಮೆಕ್ಕಳ ಉಪಸ್ಥಿತರಿದ್ದರು. ಗ್ರಂಥಾಲಯ  ಕಾರ್ಯದರ್ಶಿ ಉದಯ ಸಾರಂಗ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries