ಉಪ್ಪಳ: ರಸಗೊಬ್ಬರದ ಬೆಲೆಯೇರಿಸಿದ ಕೇಂದ್ರ ಸರ್ಕಾರದ ರೈತದ್ರೋಹಿ ತೀರ್ಮಾನಕ್ಕೆದುರಾಗಿ ಬಾಯಾರು ಪದವುನಲ್ಲಿ ರೈತಸಂಘದ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನಾ ಸಭೆಯನ್ನು ರೈತಸಂಘದ ರಾಜ್ಯಸಮಿತಿ ಸದಸ್ಯ ಕೆ. ಆರ್ ಜಯಾನಂದ ಉದ್ಘಾಟಿಸಿದರು. ಚಂದ್ರಹಾಸ ಶೆಟ್ಟಿ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಸ್ವಾಗತಿಸಿದರು. ರೈತಸಂಘ ಜಿಲ್ಲಾ ಸಮಿತಿ ಸದಸ್ಯೆ ಗೀತಾ ಸಾಮಾನಿ, ಪುರುಷೋತ್ತಮ ಬಿ, ಶ್ಯಾಮ್ ಭಟ್ ಮಾಸ್ತರ್, ವಿನಯ್ ಕುಮಾರ್ ಬಾಯಾರ್, ಚಂದ್ರ ನಾಯಕ್, ಹುಸೈನ್ ಮಾಸ್ತರ್, ಕರುಣಾಕರ ಶೆಟ್ಟಿ ಭಾಗವಹಿಸಿದ್ದರು.

