HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ಪೂರ್ಣ

ಕಾಸರಗೋಡು: ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಕಾಸರಗೋಡು ಜಿಲ್ಲೆಯಲ್ಲಿ ಶಾಂತಿ ಸಮಾಧಾನಪರವಾಗಿ ಪೂರ್ತಿಗೊಂಡಿದೆ. ಕಾಸರಗೋಡು ಸರ್ಕಾರಿ ಕಾಲೇಜು ಮತ್ತು ಕಾಞಂಗಾಡು ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ ಎಣಿಕೆ ಕೇಂದ್ರ ಸಜ್ಜುಗೊಳಿಸಲಾಗಿತ್ತು. ಮತ ಎಣಿಕೆ ಕೇಂದ್ರ ಸುತ್ತು ವ್ಯಾಪಕ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿತ್ತು. 


ಬೆಳಗ್ಗೆ 7ಕ್ಕೆ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ವೀಕ್ಷಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಟ್ರಾಂಗ್ ರೂಮ್ ಬಾಗಿಲು ತೆರೆದು ಮತ ಯಂತ್ರಗಳನ್ನು ಎಣಿಕೆ ಟೇಬಲ್‍ಗೆ ತಂದು ಆರಂಭದಲ್ಲಿ ಅಂಚೆಮತಗಳನ್ನು ಎಣಿಕೆ ಮಾಡಿದ ನಂತರ ಬೆಳಗ್ಗೆ 8.30ಕ್ಕೆ ಇವಿಎಂಗಳಲ್ಲಿನ ಮತ ಎಣಿಕೆ ಆರಂಭಿಸಲಾಗಿತ್ತು. ಪ್ರತಿ ಸುತ್ತಿನ ಎಣಿಕೆಯ ನಂತರ, ಮಾಹಿತಿಯನ್ನು ಎನ್‍ಕೋರ್ ಸಾಫ್ಟ್‍ವೇರ್‍ನಲ್ಲಿ ದಾಖಲಿಸಿ, ಪ್ರತಿ ಸಉತ್ತಿನ ಮತ ಎಣಿಕೆ ಬಗ್ಗೆ ಮಾಹಿತಿ ಒದಗಿಸಲಾಗಿತ್ತು. ಒಂದು ಸುತ್ತಿನ ಕಾರ್ಯವಿಧಾನಗಳು ಪೂರ್ಣಗೊಂಡ ನಂತರವೇ ಮುಂದಿನ ಸುತ್ತಿನ ಎಣಿಕೆ ಯಂತ್ರಗಳನ್ನು ಸ್ಟ್ರಾಂಗ್ ರೂಮ್‍ನಿಂದ ತರಲಾಗುತ್ತಿದ್ದು, ವಿವಿಪಿಎಟಿ ಸ್ಲಿಪ್‍ಗಳನ್ನು ಕಡ್ಡಾಯವಾಗಿ ಪರಿಶೀಲಿಸುವ ಪ್ರಕ್ರಿಯೆ ನಡೆದಿದೆ.

ಚುನಾವಣಾ ಆಯೋಗದ ವೀಕ್ಷಕರ ಹೊರತುಪಡಿಸಿ, ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೆÇೀನ್‍ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು.  ಈ ಬಾರಿ (ರೆಡ್ ಮೀಡಿಯಾ) ಎಣಿಕೆ ಕೇಂದ್ರಗಳಿಗೆ ಅಕ್ರಮವಾಗಿ ಪ್ರವೇಶಿಸುವುದನ್ನು ತಡೆಯಲು ಕ್ಯೂಆರ್ ಕೋಡ್ ಹೊಂದಿರುವ ಐಡಿ ಕಾರ್ಡ್‍ಗಳನ್ನು ಪರಿಚಯಿಸಲಾಗಿತ್ತು. ಮತ ಎಣಿಕೆ ಕೇಂದ್ರದಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಅಲವಡಿಸಲಾಗಿದ್ದು,  ಎಣಿಕೆ ಕೋಷ್ಟಕಗಳೊಂದಿಗೆ ಸಭಾಂಗಣವನ್ನು ಪ್ರವೇಶಿಸಲು ಕ್ಯೂಆರ್ ಕೋಡ್‍ಗಳನ್ನು ಹೊಂದಿರುವ ಐಡಿ ಕಾರ್ಡ್ ಅನ್ನು ಸ್ಕ್ಯಾನ್ ಮಾಡಿದ ನಂತರವೇ ಅವಕಾಶ ಕಲ್ಪಿಸಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries