HEALTH TIPS

ಕಾರ್ಮಿಕರ ದಿನಾಚರಣೆ-ಕಾಸರಗೋಡಿನಲ್ಲಿ ಮೇಡೇ ರ್ಯಾಲಿ, ಸಾರ್ವಜನಿಕ ಸಭೆ

ಕಾಸರಗೋಡು: ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರಿಂದ ಕಾಸರಗೋಡು ನಗರದಲ್ಲಿ ಬೃಃತ್ ಮೆರವಣಿಗೆ, ಸಭೆ ನಡೆಯಿತು.  '8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ ಹಾಗೂ 8 ಗಂಟೆ ವಿನೋದ'ಎಂಬ ಘೋಷಣೆ ಖಚಿತಪಡಿಸಲು ನಡೆಸಿದ ಐತಿಹಾಸಿಕ ಮುಷ್ಕರದ ಯಶಸ್ಸಿನ ಸ್ಮರಣಾರ್ಥ ಮೇ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ರಾಷ್ಟ್ರೀಯ, ರಾಜ್ಯ,  ಜಿಲ್ಲಾ ಹಾಗೂ  ಪ್ರಾದೇಶಿಕ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳು ದಿನಾಚರಣೆಯಂಗವಾಗಿ ರ್ಯಾಲಿ, ಸಾರ್ವಜನಿಕಸಭೆ ಆಯೋಜಿಸಿತ್ತು.


Áಸರಗೋಡಿನಲ್ಲಿ ನಡೆದ ಸಂಯುಕ್ತ ಟ್ರೇಡ್ ಯೂನಿಯನ್ ಕಾರ್ಯಕ್ರಮವನ್ನು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮಣಿಮೋಹನ್ ಉದ್ಘಾಟಿಸಿದರು. ಎಐಟಿಯುಸಿ ಮುಖಂಡ ಮಧುಸೂದನನ್ ನಂಬ್ಯಾರ್ ಅಧ್ಯಕ್ಷತೆ ವಹಿಸಿದ್ದರು.  

ಬಿಜು ಉಣ್ಣಿತ್ತಾನ್, ರಾಘವನ್, ಸುರೇಶ್ ಬಾಬು, ಪ್ರಕಾಶನ್, ಸುನಿಲ್ ಕುಮಾರ್ ಕರಿಚ್ಚೇರಿ, ಕೆ. ಮಣಿಕಂಠನ್, ಸುಜಿತ್ ಪಿ.ವಿ, ಸಿ.ವಿ. ಕೃಷ್ಣನ್, ಕೆ. ನಾರಾಯಣನ್, ಸಿ. ಶಾಂತ ಕುಮಾರಿ, ಪಿ. ಶಿವಪ್ರಸಾದ್, ಅನುರಾಜ್ ಎಂ, ಅಬ್ದುಲ್ ರಹ್ಮಾನ್, ಎ. ನಾರಾಯಣನ್, ಪಿ. ಜಾನಕಿ, ಪಿ.ವಿ. ಕುಂಞಂಬು, ಸಿ.ವಿ. ಕೃಷ್ಣನ್, ಕೆ. ರವೀಂದ್ರನ್  ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಕಾರ್ಮಿಕರಿಂದ ಮೇಡೇ ರ್ಯಾಲಿ ನಡೆಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries