ಬದಿಯಡ್ಕ: ನಾರಂಪಾಡಿ ಶ್ರೀ ಉಮಾ ಮಹೇಶ್ವರ ಕ್ಷೇತ್ರದ ಎಲ್ಲಾ ಉತ್ಸವ, ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಎಲ್ಲಾ ಕಾರ್ಯಕರ್ತರಿಗೂ ಪ್ರೇರಣೆ ನೀಡಿದ, ಆರ್ಯಾಂಬಾ ಮಾತೃ ಮಂಡಳಿಯ ಸ್ಥಾಪಕ ಅಧ್ಯಕ್ಷೆ, ಹಿರಿಯರಾದ ವಸಂತಿ ಟೀಚರ್ ಅಗಲ್ಪಾಡಿ ಅವರಿಗೆ ಸೇವಾ ಸಮಿತಿ, ಭಜನ ಸಮಿತಿ ಹಾಗೂ ಮಾತೃ ಸಮಿತಿಯ ಪರವಾಗಿ ಗೌರವಾರ್ಪಣೆ ನಡೆಯಿತು.
ಸಭೆಯ ಅಧ್ಯಕ್ಷರಾಗಿದ್ದ ಬಾಲಕೃಷ್ಣ ಮಾಸ್ತರ್ ನಾರಂಪಾಡಿ ಅವರು ವಸಂತಿ ಟೀಚರ್ ಅವರ ನಿಸ್ವಾರ್ಥ ಸೇವೆಗಳನ್ನು ಸ್ಮರಿಸಿದರು. ಹರಿನಾರಾಯಣ ಶಿರಂತಡ್ಕ ಸ್ವಾಗತಿಸಿ, ಗೋಪಾಲಕೃಷ್ಣ ಮುಂಡೋಲುಮೂಲೆ ವಂದಿಸಿದರು. ಶ್ರೀ ಉಮಾಮಹೇಶ್ವರ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಜನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಆರ್ಯಾಂಬಾ ಮಾತೃ ಮಂಡಳಿಯ ಪದಾಧಿಕಾರಿಗಳು, ಅಭಿಮಾನಿಗಳು, ಭಗವದ್ಭಕ್ತರು ಉಪಸ್ಥಿತರಿದ್ದರು.

.jpg)
.jpg)
