HEALTH TIPS

ಸೆಲ್‌ ಫೋನ್‌ಗಳಲ್ಲಿ ಮೊಳಗಿದ ಎಚ್ಚರಿಕೆ ಸಂದೇಶ

ನವದೆಹಲಿ: ತುರ್ತು ಸಂದರ್ಭ ಮತ್ತು ನೈಸರ್ಗಿಕ ವಿಕೋಪಗಳ ಬಗ್ಗೆ ಎಚ್ಚರಿಕೆ ನೀಡುವ 'ಸೆಲ್ ಬ್ರಾಡ್‌ಕಾಸ್ಟಿಂಗ್ ಅಲರ್ಟ್' ಅನ್ನು ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶನಿವಾರ ಪ್ರಾರಂಭಿಸಿದರು. ಇದರ ನಂತರ ಪ್ರಾಯೋಗಿಕವಾಗಿ ದೇಶದಾದ್ಯಂತ ಜನರ ಮೊಬೈಲ್‌ ಫೋನ್‌ಗಳಲ್ಲಿ ಎಚ್ಚರಿಕೆ ಸಂದೇಶ ಮೊಳಗಿತು.

ಸೇವೆಯ ಪ್ರಾಯೋಗಿಕ ಚಾಲನೆಯ ಬಗ್ಗೆ ಏಪ್ರಿಲ್ 29ರಂದು ಮಾಹಿತಿ ನೀಡಿದ್ದ ಟೆಲಿಕಾಂ ಇಲಾಖೆಯು, ಎಚ್ಚರಿಕೆಯನ್ನು ನಿರ್ಲಕ್ಷಿಸುವಂತೆ ಮತ್ತು ಆತಂಕಪಡದಂತೆ ಮನವಿ ಮಾಡಿತ್ತು.

ಪ್ರಾಯೋಗಿಕ ಎಚ್ಚರಿಕೆ ಸಂದೇಶದಲ್ಲಿ, 'ತೀವ್ರವಾದ ಎಚ್ಚರಿಕೆ. ವಿಪತ್ತಿನ ಕುರಿತು ತ್ವರಿತವಾಗಿ ಎಚ್ಚರಿಸಲು ಭಾರತವು ತನ್ನ ನಾಗರಿಕರಿಗಾಗಿ ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ಸೆಲ್‌ ಬ್ರಾಡ್‌ಕಾಸ್ಟ್‌ಗೆ ಚಾಲನೆ ನೀಡಿದೆ. ಜಾಗೃತ ನಾಗರಿಕರಿದ್ದರೆ ರಾಷ್ಟ್ರ ಸುರಕ್ಷಿತ. ಈ ಸಂದೇಶ ಸ್ವೀಕರಿಸಿದವರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಇದು ಪ್ರಾಯೋಗಿಕ ಸಂದೇಶವಷ್ಟೆ -ಭಾರತ ಸರ್ಕಾರ' ಎಂದು ಬರೆಯಲಾಗಿದೆ.

ಚುನಾವಣೆ ನಡೆಯಲಿರುವ ರಾಜ್ಯಗಳನ್ನು ಹೊರತುಪಡಿಸಿ, ದೇಶದಾದ್ಯಂತ ಎಲ್ಲಾ ಟೆಲಿಕಾಂ ಆಪರೇಟರ್‌ಗಳ ನೆಟ್‌ವರ್ಕ್‌ನಲ್ಲಿ ಎಚ್ಚರಿಕೆ ಸಂದೇಶವನ್ನು ಕಳುಹಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries