ಕಠ್ಮಂಡು: ಸೋಮವಾರ ಬೆಳಿಗ್ಗೆ ನೇಪಾಳದ ಕಠ್ಮಂಡುವಿನಲ್ಲಿ ಟರ್ಕಿಶ್ ಏರ್‌ಲೈನ್ಸ್ ವಿಮಾನದಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಇಸ್ತಾಂಬುಲ್ ನಿಂದ ಆಗಮಿಸಿದ್ದ ವಿಮಾನವು ನೇಪಾಳದಲ್ಲಿ ಭೂಸ್ಪರ್ಶ ಮಾಡಿದ ಬಳಿಕ ವಿಮಾನ ನಿಲ್ದಾಣವನ್ನು ಸುಮಾರು ಒಂದು ಗಂಟೆ ಕಾಲ ಬಲವಂತವಾಗಿ ಮುಚ್ಚಬೇಕಾಯಿತು ಎಂದು ಹೇಳಲಾಗಿದೆ.
ವಿಮಾನದ ಬಲ ಹಿಂಬದಿ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಏರ್‌ಬಸ್ A333 ವಿಮಾನದಲ್ಲಿದ್ದ ಎಲ್ಲ 277 ಪ್ರಯಾಣಿಕರು ಹಾಗೂ 11 ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ವಿಮಾನದಿಂದ ತೆರವುಗೊಳಿಸಲಾಯಿತು ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರ ಜ್ಞಾನೇಂದ್ರ ಭುಲ್ ತಿಳಿಸಿದ್ದಾರೆ.

