ಕುಂಬಳೆ: ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ ಕುಂಬಳೆ ಆರಿಕ್ಕಾಡಿ ಬನ್ನಂಗಳ ನಿವಾಸಿ ಅಬ್ದುಲ್ ಜಲೀಲ್ ಯಾನೆ ಜಲ್ಲು (28) ಎಂಬಾತನನ್ನು ಕುಂಬಳೆ ಠಾಣೆ ಎಸ್ ಐ ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
2021ರಲ್ಲಿ ಬದಿಯಡ್ಕ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಹತ್ಯಾಯತ್ನ ಪ್ರಕರಣ, ಕುಂಬಳೆ ಠಾಣೆಯಲ್ಲಿ ದಾಖಲಾದ ಆಮ್ಸ್ ಆ್ಯಕ್ಟ್ ಪ್ರಕರಣ, ಕೊಡೆದಾಟ, ಗಾಂಜಾ ಸಾಗಾಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಅಬ್ದುಲ್ ಜಲೀಲ್ ಆರೋಪಿಯಾಗಿದ್ದಾನೆ. ತಲೆಮರೆಸಿಕೊಂಡಿದ್ದ ಈತನಿಗಾಗಿ ಹುಡುಕಾಟ ನಡೆಸುತ್ತಿರುವ ಮಧ್ಯೆ ವಳಪಟ್ಟಣದಲ್ಲಿರುವುದಾಗಿ ಪೆÇಲೀಸರಿಗೆ ಮಾಹಿತಿ ಲಭಿಸಿತ್ತು. ಎಸ್‍ಐ ಅನಂತಕೃಷ್ಣನ್ ಆರ್ ಮೆನೋನ್, ಸಿವಿಲ್ ಪೆÇಲೀಸ್ ಆಫೀಸರ್‍ಗಳಾದ ಪ್ರಶಾಂತ್, ಮಹೇಶ್ ಎಂಬವರು ಕಾರ್ಯಾಚರಣೆ ನಡೆಸಿದ್ದಾರೆ.

